ರಾಹುಲ್ ಗಾಂಧಿ ವಯನಾಡು ಕಚೇರಿ ಧ್ವಂಸ: 25 ಮಂದಿ ಅರೆಸ್ಟ್

ಶನಿವಾರ, 25 ಜೂನ್ 2022 (16:39 IST)
ವಯನಾಡಿನ ಸಂಸದರಾಗಿರುವ ರಾಹುಲ್ ಗಾಂಧಿ ಅವರು ಕೇರಳದ ಗುಡ್ಡಗಾಡು ಪ್ರದೇಶಗಳ ಮತ್ತು ಅರಣ್ಯಗಳ ಸುತ್ತ ಬಫರ್ ವಲಯಗಳನ್ನು ರಚಿಸುವ ವಿಷಯದಲ್ಲಿ ಮಧ್ಯಪ್ರವೇಶಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ವಿದ್ಯಾರ್ಥಿಗಳು ಅವರ ಕಚೇರಿ ಧ್ವಂಸ ಮಾಡಿದ ಪ್ರಕರಣದಲ್ಲಿ 25 ಮಂದಿಯನ್ನು ಬಂಧಿಸಲಾಗಿದೆ.
ಘಟನೆ ಸಂಬಂದ ಇಲ್ಲಿಯವರೆಗೂ ಒಟ್ಟು 25 ಕ್ಕು ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದ್ದು ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ. ಪ್ರತಿಭಟನಾ ಮೆರವಣಿಗೆಯಲ್ಲಿ ಒಟ್ಟು 100ಕ್ಕು ಹೆಚ್ಚು ಮಂದಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ಇದೇ ವೇಳೆ ದಾಳಿ ಹಿಂದೆ ಆಡಳಿತ ಸಿಪಿಎಂ ಪಕ್ಷದ ಕೈವಾಡವಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆಪ್ತರು ಸಹ ದಾಳಿಯ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದೆ.
 ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು ಪರಿಶೀಲಿಸುವುದಾಗಿ ವೀಣಾ ತಿಳಿಸಿದ್ದಾರೆ. ಏತನ್ಯಧ್ಯೆ ಕಾಂಗ್ರೆಸ್ ಕಾರ್ಯಕರ್ತರು ಸಿಪಿಎಂ ಕಚೇರಿಗೆ ನುಗಿ ದಾಂಧಲೆ ನಾಡೆಸಿದ್ದಾರೆ ಎಂದು ಸಿಪಿಎಂ ಆರೋಪಿಸಿದೆ.
ಗಟನೆ ಸಂಬಂಧ ಭದ್ರತಾ ಕೋಪಕ್ಕೆ ಕಾರಣವಾಗಿರುವ ಸಂಬಂದ ಡಿಎಸ್ಪಿಯನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಮತ್ತು ಎಡಿಜಿಪಿ ಮನೋಜ್ ಅಬ್ರಾಹಂಗೆ ತನಿಖಾಧಿಕಾರಿಯಾಗಿ ನೇಮಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ