ರಾಜಸ್ತಾನದ ಪಠ್ಯಪುಸ್ತಕಗಳಲ್ಲಿ ಅಭಿನಂದನ್ ಕಥೆಯನ್ನು ಸೇರಿಸಬೇಕು- ಶಿಕ್ಷಣ ಮಂತ್ರಿಯಿಂದ ಪ್ರಸ್ತಾವನೆ

ಬುಧವಾರ, 6 ಮಾರ್ಚ್ 2019 (05:53 IST)
ಜೈಪುರ : ಭಾರತಾಂಬೆಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ  ಕಥೆಯನ್ನು ಪಾಠವಾಗಿ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದು ರಾಜಸ್ತಾನದ ಶಿಕ್ಷಣ ಮಂತ್ರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಅಭಿನಂದನ್ ಅವರ ಶೌರ್ಯ, ಪರಾಕ್ರಮವನ್ನು ಮಕ್ಕಳು ತಿಳಿಯಬೇಕು ಎಂದು ಜೋಧಪುರದ ಪೈಲಟ್ ಶಿಕ್ಷಣ ಶಾಲೆಯ ಪಠ್ಯಪುಸ್ತಕದಲ್ಲಿ ಅಭಿನಂದನ್ ಅವರ ಬಗ್ಗೆ ಪಾಠವನ್ನು ಸೇರಿಸಲಾಗುತ್ತದೆ. ಈ ಮೂಲಕ ವೀರಯೋಧನಿಗೆ ನಮ್ಮ ಕಡೆಯಿಂದ ಗೌರವ ಸಲ್ಲಿಸುತ್ತಿದ್ದೇವೆ ಎಂದು ರಾಜಸ್ತಾನದ ಶಿಕ್ಷಣ ಮಂತ್ರಿ ಗೋವಿಂದ್ ಸಿಂಗ್ ದೋತಸ್ರಾ ಸೋಮವಾರದಂದು ಟ್ವೀಟ್ ಮಾಡಿದ್ದಾರೆ.

 

ಆದರೆ ಯಾವ ತರಗತಿಯ ಪಠ್ಯದಲ್ಲಿ ಅಭಿನಂದನ್ ಅವರ ಪಾಠವನ್ನು ಸೇರಿಸಲಾಗುತ್ತಿದೆ ಎಂಬುದರ ಕುರಿತು ರಾಜಸ್ತಾನ ಶಿಕ್ಷಣ ಮಂತ್ರಿಗಳು ತಿಳಿಸಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ