ಆರ್.ಬಿ.ಐ ಈ ಮೂರು ಬ್ಯಾಂಕುಗಳಿಗೆ ರೂ. 8 ಕೋಟಿ ದಂಡ ವಿಧಿಸಿದ್ಯಾಕೆ ಗೊತ್ತಾ?

ಬುಧವಾರ, 6 ಮಾರ್ಚ್ 2019 (06:05 IST)
ನವದೆಹಲಿ : ನಿರ್ದೇಶನಗಳನ್ನು ಪಾಲಿಸದ ಹಿನ್ನಲೆಯಲ್ಲಿ ಆರ್.ಬಿ.ಐ ಮೂರು ಬ್ಯಾಂಕುಗಳಿಗೆ ಒಟ್ಟು ರೂ. 8 ಕೋಟಿ ದಂಡ ವಿಧಿಸಿದೆ.


ಸ್ವಿಫ್ಟ್ (ಜಾಗತಿಕ ಅಂತರ್ ಬ್ಯಾಂಕ್ ಹಣಕಾಸು ದೂರಸಂಪರ್ಕ ಸಂಸ್ಥೆಯು) ಬ್ಯಾಂಕ್ ಗಳಲ್ಲಿ ನಡೆಯುವ ಹಣಕಾಸು ವಹಿವಾಟಿನ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸಂಪರ್ಕ ಜಾಲ ಒದಗಿಸುತ್ತದೆ. ಆದರೆ ಕರ್ಣಾಟಕ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕರೂರ್ ವೈಶ್ಯ ಬ್ಯಾಂಕ್  ಈ ನಿಯಮಗಳನ್ನು ತಡವಾಗಿ ಜಾರಿ ತಂದಿದೆ.


ಆದಕಾರಣ ಆರ್.ಬಿ.ಐ ಕರ್ಣಾಟಕ ಬ್ಯಾಂಕ್ ಗೆ ರೂ. 4 ಕೋಟಿ, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗೆ ರೂ. 3 ಕೋಟಿ, ಕರೂರ್ ವೈಶ್ಯ ಬ್ಯಾಂಕ್ ಗೆ ರೂ. 1 ಕೋಟಿ ದಂಡ ವಿಧಿಸಿದೆ ಎಂದು ಕರ್ಣಾಟಕ ಬ್ಯಾಂಕ್ ಸೆಬಿಗೆ ಮಾಹಿತಿ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ