ಗಾಂಧೀಜಿ ಜೊತೆ 3-4 ಮಹಿಳೆಯರ್ತಿದ್ರು, ಮೋಹನ್ ಭಾಗವತ್ ಜೊತೆ ಯಾರಾದ್ರೂ ಇರ್ತಾರಾ? ರಾಹುಲ್ ಗಾಂಧಿ ಪ್ರಶ್ನೆ

ಗುರುವಾರ, 16 ಸೆಪ್ಟಂಬರ್ 2021 (10:00 IST)
ನವದೆಹಲಿ: ಆರ್ ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯೊಂದರಿಂದ ಈಗ ಅವರು ಟ್ರೋಲ್ ಗೊಳಗಾಗಿದ್ದಾರೆ.


ಆರ್ ಎಸ್ಎಸ್ ಮಹಿಳಾ ವಿರೋಧಿ ಎಂದು ವಾಗ್ದಾಳಿ ನಡೆಸುವ ಭರದಲ್ಲಿ ರಾಹುಲ್ ‘ಮಹಾತ್ಮಾ ಗಾಂಧೀಜಿ ಜೊತೆ ಸದಾ 3-4 ಮಹಿಳೆಯರಿರುತ್ತಿದ್ದರು. ಆದರೆ ಆರ್ ಎಸ್ಎಸ್ ನಾಯಕ ಮೋಹನ್ ಭಾಗವತ್ ಜೊತೆಗೆ ಒಬ್ಬರಾದರೂ ಮಹಿಳೆ ಇರೋದು ನೋಡಿದ್ದೀರಾ? ಇದರ ಅರ್ಥ ಆರ್ ಎಸ್ಎಸ್ ಮಹಿಳಾ ವಿರೋಧಿ ಎಂದಾಗಿದೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದ್ದರು.

ಆದರೆ ಅವರ ಹೇಳಿಕೆ ಈಗ ಅವರಿಗೇ ಮುಳುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನೀವು ಮಹಾತ್ಮಾ ಗಾಂಧೀಜಿಯವರನ್ನು ಹೊಗಳುತ್ತಿದ್ದೀರೋ, ಕಾಲೆಳೆಯುತ್ತಿದ್ದೀರೋ ಎಂದೇ ಗೊತ್ತಾಗುತ್ತಿಲ್ಲ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು, ಈಗೇನಾದರೂ ಗಾಂಧೀಜಿ ಬದುಕಿದ್ದರೆ ಈ ಹೇಳಿಕೆ ಕೇಳಿ ಹೃದಯಾಘಾತವಾಗುತ್ತಿತ್ತು ಎಂದು ಟ್ರೋಲ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ