ಲಕ್ನೋ: ಪಾರ್ಟಿಗೆಂದು ಕರೆಸಿ ಸ್ನೇಹಿತರು ಅಪ್ರಾಪ್ತ ಬಾಲಕನನ್ನು ವಿವಸ್ತ್ರಗೊಳಿಸಿ ಬಾಯಿಗೆ ಮೂತ್ರ ವಿಸರ್ಜಿಸಿ ಅಸಭ್ಯ ವರ್ತನೆ ತೋರಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅದಿತ್ಯ ಎಂಬ ಬಾಲಕ ನೇಣಿಗೆ ಶರಣಾದಾತ. ಈತನ ಸ್ನೇಹಿತರು ಈತನನ್ನು ಪಾರ್ಟಿಗೆ ಆಹ್ವಾನಿಸಿದ್ದರು. ಬಳಿಕ ಆತನನ್ನು ವಿವಸ್ತ್ರಗೊಳಿಸಿದ್ದಾರೆ. ಅಷ್ಟೂ ಸಾಲದೆಂಬಂತೆ ಬಾಯಿಗೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾರೆ.
ಇದರಿಂದ ಆತ ತೀರಾ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಡಿಸೆಂಬರ್ 20 ರಂದು ಘಟನೆ ನಡೆದ ಬಳಿಕ ಬಾಲಕ ಮನೆಗೆ ಬಂದಿದ್ದ. ಮರುದಿನ ಆತ ಕುಟುಂಬದವರ ಬಳಿ ಎಲ್ಲಾ ವಿಚಾರ ಹೇಳಿಕೊಂಡಿದ್ದ. ಇದರ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ಮೊದಲು ದೂರು ಸ್ವೀಕರಿಸಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪೊಲೀಸರೂ ದೂರು ದಾಖಲಿಸದೇ ಸತಾಯಿಸಿದರು. ಇದರಿಂದ ಆತ ಮತ್ತಷ್ಟು ಮನನೊಂದಿದ್ದ. ಇದೇ ಕಾರಣಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.