ಕೇರಳ: ರಾಜ್ಯ ಆರೋಗ್ಯ ಇಲಾಖೆ ಪ್ರಕಾರ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ವಯನಾಡಿನ ಚೂರಲ್ಮಲಾದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಎರಡು ಭೀಕರ ಭೂಕುಸಿತದಲ್ಲಿ 400ಕ್ಕೂ ಅಧಿಕ ಮನೆಗಳು ನೆಲಸಮವಾಗಿದ್ದು, ಹಲವಾರ ಮಂದಿ ಗಾಯಗೊಂಡಿದ್ದಾರೆ. ಭೂಕುಸಿತ ಸಂಭವಿಸಿದ ನಂತರ 3000 ಸಾವಿರಕ್ಕೂ ಅಧಿಕ ಮಂದಿಯನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಂತರಿಸಲಾಗಿದೆ.
ಇನ್ನೂ ಭೀಕರ ಭೂಕುಸಿತಕ್ಕೆ ವಯನಾಡು ತತ್ತರಿಸಿಹೋಗಿದ್ದು, ಮನೆಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ, ಮರಗಳು ನೆಲಸಮಗೊಂಡಿದ್ದರಿಂದ ರಕ್ಷಣಾ ಕಾರ್ಯಾಚರಣಗೆ ಅಡ್ಡಿಯಾಗಿದೆ.
ಏತನ್ಮಧ್ಯೆ, ಮಂಗಳವಾರ, 143 ಜೀವಗಳನ್ನು ಬಲಿ ಪಡೆದ ವಯನಾಡ್ ಭೂಕುಸಿತದ ನಂತರ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆಯ ಅವಧಿಯನ್ನು ಆಚರಿಸಲಾಗಿದ್ದು, ಮಂಗಳವಾರ ಕೇರಳ ವಿಧಾನಸಭೆಯಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗಿದೆ.