ಮೋದಿ ಭೇಟಿ : ಬಿಜೆಪಿ ಸೇರ್ಪಡೆಯತ್ತ ರಾಖಿ ಸಾವಂತ್ ಚಿತ್ತ

ಸೋಮವಾರ, 19 ಮೇ 2014 (15:00 IST)
ರಾಷ್ಟ್ರೀಯ ಆಮ್ ಪಾರ್ಟಿ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಕೇವಲ  1,995 ಮತಗಳನ್ನು ಪಡೆದಿದ್ದ ರಾಖಿ ಸಾವಂತ್ ತಾನೇ ಸ್ಥಾಪಿಸಿರುವ ರಾಷ್ಟ್ರೀಯ ಆಮ್ ಪಾರ್ಟಿಗೆ ರಾಜೀನಾಮೆ ನೀಡಿದ್ದು  ಬಿಜೆಪಿಯನ್ನು ಸೇರುವ ಆಶಯವನ್ನು ವ್ಯಕ್ತ ಪಡಿಸಿದ್ದಾರೆ.
 
ಶಿವಸೇನೆಯ ಗಜಾನನ ಚಂದ್ರಕಾಂತ್ ಕೀರ್ತಿಕರ್, ಕಾಂಗ್ರೆಸ್ಸಿನ ಗುರುದಾಸ್ ಕಾಮತ್ ಮತ್ತು ಆಪ್‪ನ ಮಾಯಾಂಕ್ ರಮೇಶ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದ ರಾಖಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದರು.  
 
ವಿಶೇಷವಾದ ಸುದ್ದಿ ಏನೆಂದರೆ ಈಗ ಅವಳು ಬಿಜೆಪಿಯನ್ನು  ಸೇರಲು ಬಯಸುತ್ತಿದ್ದಾಳೆ. ವರದಿಗಳ ಪ್ರಕಾರ ಅವಳು ಬಿಜೆಪಿ ನಾಯಕರಾದ 'ರಾಜನಾಥ್ ಸಿಂಗ್, ನರೇಂದ್ರ ಮೋದಿ ಮತ್ತು ಸುಷ್ಮಾ ಸ್ವರಾಜ್‌ರವರನ್ನು ಭೇಟಿಯಾಗಲು ದೆಹಲಿಗೆ ಹೋಗುತ್ತಿದ್ದಾರೆ. 
 
ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ರಾಖಿ 'ನನಗೆ ನನ್ನ ತಪ್ಪಿನ  ಅರಿವಾಗಿದ್ದು, ಈಗ ಬಿಜೆಪಿಯನ್ನು ಸೇರಲು ಬಯಸಿದ್ದೇನೆ. ಪಕ್ಷ ನನ್ನನ್ನು ಸ್ವೀಕರಿಸುತ್ತದೆ ಎಂಬ ನಂಬಿಕೆ ಇದೆ. ನಾನಿನ್ನು ಚುನಾವಣೆಗೆ ಸ್ಪರ್ಧಿಸಲು ಬಯಸುವುದಿಲ್ಲ. ಆದರೆ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಲು ಬಿಜೆಪಿಯನ್ನು ಸೇರ ಬಯಸುತ್ತೇನೆ" ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ