ಬಾಲಕಿಯ ಸಂಬಂಧಿಕನೊಬ್ಬ ಆಗಾಗ ಪೀಡಿತಳ ಮನೆಗೆ ಬಂದು ಹೋಗುತ್ತಿದ್ದ. ಹಾಗೆಯೇ ನಿನ್ನೆ ಸಹ ಬಾಲಕಿಯ ಮನೆಗೆ ತೆರಳಿದ್ದ ಆತ ಪಾಲಕರ ಅನುಪಸ್ಥಿತಿಯ ಲಾಭ ತೆಗೆದುಕೊಂಡು ಬಟ್ಟೆ ಕೊಡಿಸುವ ನೆಪ ಹೇಳಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಾತ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಸಂಬಂಧಿಕ ಯುವಕನೇ ಅತ್ಯಾಚಾರ ಮಾಡಿದ ಘಟನೆ ರಾಜಸ್ಥಾನದ ಬಾಡ್ಮೇರ್ ಜಿಲ್ಲೆಯಲ್ಲಿ ನಡೆದಿದೆ. ತಾಲ್ಲೂಕಿನ ರೇವಂಡಿ ಗ್ರಾಮದಲ್ಲಿ ಈ ಕುಕೃತ್ಯ ನಡೆದಿದ್ದು, ಆರೋಪಿ ಶಂಶೇರ್ನನ್ನು ಬಂಧಿಸಲಾಗಿದೆ.
ಮನೆಗೆ ಹಿಂತಿರುಗಿ ಪಾಲಕರಿಗೆ ವಿಷಯ ತಿಳಿಸಿದ ಬಾಲಕಿ, ತಂದೆಯೊಡಗೂಡಿ ಬಾಡ್ಮೇರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.