ಲಕ್ನೋ : ಸಾರ್ವಜನಿಕ ಶೌಚಾಲಯದೊಳಗೆ 20 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಪ್ರತಾಪ್ಗಢ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಟ್ಯಾಂಡ್ನಲ್ಲಿ ನಡೆದಿದೆ.
ಈ ಘಟನೆ ಮಾರ್ಚ್ 19 ರಂದು ನಡೆದಿದ್ದು, ಆರೋಪಿಯನ್ನು ಅಣ್ಣ ಎಂದು ಗುರುತಿಲಾಗಿದೆ. ಸಂತ್ರಸ್ತೆ ತನ್ನ ಪತಿಯೊಂದಿಗೆ ರೈಲಿಗಾಗಿ ಕಾಯುತ್ತಿದ್ದರು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಆರ್ಎನ್ರೈ ಹೇಳಿದ್ದಾರೆ.
ಪತಿ ಮಹಿಳೆಯನ್ನು ಒಂಟಿಯಾಗಿ ಬಿಟ್ಟು ಬೆಳಗ್ಗೆ ಚಹಾ ಖರೀದಿಸಲು ಹೋಗಿದ್ದಾನೆ. ಈ ವೇಳೆ ಆರೋಪಿ ಮಹಿಳೆಯ ಬಳಿಗೆ ಬಂದು ಕೀಲಿಯನ್ನು ನೀಡಿ, ಪಾರ್ಕಿಂಗ್ ಬಳಿ ಇರುವ ಸ್ವಚ್ಛ ಶೌಚಾಲಯಕ್ಕೆ ಹೋಗಿ ಬಳಸಬಹುದೆಂದು ತಿಳಿಸಿ ಆಕೆಗೆ ಕೀಲಿಯನ್ನು ನೀಡಿದ್ದಾನೆ.
ಹೊರಗೆ ನಿಂತು ಕಾಯುತ್ತಿದ್ದ ಆರೋಪಿ ಮಹಿಳೆ ಶೌಚಾಲಯಕ್ಕೆ ಪ್ರವೇಶಿಸಿದ ಕೂಡಲೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಳಿಕ ಪತಿ ತನ್ನ ಪತ್ನಿಯನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಲೀಸರು (ಐಪಿಸಿ ಸೆಕ್ಷನ್ 376) ಅತ್ಯಾಚಾರ ಆರೋಪದಡಿ ಎಫ್ಐಆರ್ ದಾಖಲಿಸಿದ್ದು, ಇದೀಗ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.