ಬಾಲಕಿ ಮನೆಯ ಸಮೀಪದ ಶೌಚಾಲಯಕ್ಕೆ ಹೋಗಿದಾಗ ಯುವಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಆಕೆ ಯಾರ ಬಳಿಯೂ ತಿಳಿಸಿರಲಿಲ್ಲ. ಆದರೆ ಬಾಲಕಿಗೆ ಮೂತ್ರದ ಸಮಸ್ಯೆಯಿಂದ ಅಸ್ವಸ್ಥಳಾದಾಗ ತಾಯಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ವೈದ್ಯರು, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.