ಕಾರಿನಿಂದ ಹೊರಗೆಳೆದು ಗಂಡ, ಅತ್ತೆ-ಮಾವನೆದುರೇ ಮಹಿಳೆಯ ಮೇಲೆ ಅತ್ಯಾಚಾರ
ಸಂಬಂಧಿಯೊಬ್ಬರ ಮನೆಯಲ್ಲಿ ಕಾರ್ಯಕ್ರಮುಗಿಸಿ ಮೈದುನನ ಕಾರಿನಲ್ಲಿ ಕುಟುಂಬ ಸಮೇತರಾಗಿ ಬರುತ್ತಿದ್ದಾಗ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ನಿಲ್ಲಿಸಿದ್ದಲ್ಲದೆ, ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗನ್ ತೋರಿಸಿ ಬೆದರಿಸಿ ಈ ಕೃತ್ಯವೆಸಗಿದ್ದಾರೆ.
ಮಹಿಳೆ ಮೇಲೆ ಅತ್ಯಾಚಾರವೆಸಗಿದ ದುರುಳರು ಪೊಲೀಸರಿಗೆ ತಿಳಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ ಮರಳಿದ್ದರು. ಆದರೆ ಸಂತ್ರಸ್ತೆಯ ಪತಿ ದುಷ್ಕರ್ಮಿಗಳ ಕಾರಿನ ನಂಬರ್ ಬರೆದಿಟ್ಟುಕೊಂಡು ಪೊಲೀಸರಿಗೆ ತಿಳಿಸಿದ್ದರಿಂದ ಸುಲಭವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.