ಕಣ್ಣಿಗೆ ಕಾಡಿಗೆ ಹಚ್ಚುವುದರಿಂದಾಗುವ ಪ್ರಯೋಜನವೇನು ಗೊತ್ತಾ

ಮಂಗಳವಾರ, 23 ಜನವರಿ 2018 (07:32 IST)
ಬೆಂಗಳೂರು : ಮಹಿಳೆಯರು ಬಳಸುವ ಸೌಂದರ್ಯದ ವಸ್ತುಗಳಲ್ಲಿ ಕಣ್ಣಿನ ಕಾಡಿಗೆಯು ಒಂದು. ಇದು ಮಹಿಳೆಯರ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ತ್ರೀಯರು ಎಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡರು ಕಣ್ಣಿಗೆ ಕಾಡಿಗೆ ಹಚ್ಚಿಲ್ಲವೆಂದರೆ ಅದು ಆಕರ್ಷಕವಾಗಿ ಕಾಣಿಸುವುದಿಲ್ಲ. ಹಿಂದಿನ ಕಾಲದಿಂದಲೂ ಕಣ್ಣಿಗೆ ಕಾಡಿಗೆ ಹಚ್ಚುವುದು ರೂಢಿಯಲ್ಲಿತ್ತು.

 
ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಕಣ್ಣು ಸುಂದರವಾಗಿ ಕಾಣುವುದು ಮಾತ್ರವಲ್ಲ. ಕಾಡಿಗೆಯು ಸೂರ್ಯನ ಕಿರಣಗಳು ಕಣ್ಣಿಗೆ ಬಿದ್ದಾಗ ಅದರ ಶಾಖದಿಂದ ಕಣ್ಣನ್ನು ರಕ್ಷಿಸುತ್ತದೆ. ಹಾಗೆ ಕಣ್ಣಿನ ಒಳಗೆ ಧೂಳು ಪ್ರವೇಶಿಸದಂತೆ ತಡೆಯುತ್ತದೆ. ಇದರಿಂದ ದೃಷ್ಟಿ ಕೂಡ ಚೆನ್ನಾಗಿ ಕಾಣಿಸುತ್ತದೆ. ಕಣ್ಣನ ತೇವಾಂಶ ಒಣಗದಂತೆ ತಡೆಯುತ್ತದೆ. ಕಣ್ಣಿನ ರೆಪ್ಪೆಗಳು ಕೂಡ ಕಾಡಿಗೆಯಿಂದಾಗಿ ದಪ್ಪವಾಗಿ ಬೆಳೆಯುತ್ತದೆ. ಇದರಿಂದಾಗಿ ಮುಖದ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಕಣ್ಣು ಕೆಂಪಾಗುವುದನ್ನು ತಡೆಯುವುದರ ಜೊತೆಗೆ ಕಣ್ಣನ್ನು ತಂಪಾಗಿ ಇಡುತ್ತದೆ. ಹಾಗೆ ಕಾಡಿಗೆಯನ್ನು ಹಚ್ಚುವುದರಿಂದ ಕೆಟ್ಟ ದೃಷ್ಟಿ ತಾಕುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ