ಹರ್ಯಾಣ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಸ್ಥಳೀಯರ ಜಿಲೇಬಿ ಉತ್ಪನ್ನವನ್ನು ಹೊಗಳಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲೇಬಿ ಉತ್ಪನ್ನವನ್ನು ವಿಶ್ವದಾದ್ಯಂತ ರಫ್ತು ಮಾಡುವ ಯೋಜನೆ ಮಾಡಬಹುದು ಎಂದಿದ್ದರು. ಅವರ ಇದೇ ಮಾತುಗಳನ್ನು ಈಗ ಕಾಂಗ್ರೆಸ್ ಸೋಲಿನ ಬಳಿಕ ಬಿಜೆಪಿ ಅಣಕವಾಡುತ್ತಿದೆ.
ಇದೇ ಕಾರಣಕ್ಕೆ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೇ ಜಿಲೇಬಿ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಅಷ್ಟೇ ಅಲ್ಲದೆ, ನಿನ್ನೆ ಬಿಜೆಪಿ ಕಾರ್ಯಕರ್ತರು ಜಿಲೇಬಿ ಹಂಚುವ ಮೂಲಕ ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಜಿಲೇಬಿ ಫೋಟೋಗಳನ್ನುಹಂಚಿಕೊಂಡಿದ್ದರು.