ಅಮೆರಿಕದ ಕಂಪನಿಯನ್ನು ಖರೀದಿಸಲಿದೆ ರಿಲಯನ್ಸ್‌

ಮಂಗಳವಾರ, 6 ಸೆಪ್ಟಂಬರ್ 2022 (14:05 IST)
ಮುಂಬೈ : ರಿಲಯನ್ಸ್ ಇಂಡಸ್ಟ್ರೀಸ್ ಅಮೆರಿಕದ Seಟಿseಊಚಿತಿಞ ಕಂಪನಿಯನ್ನು 32 ದಶಲಕ್ಷ ಡಾಲರ್(ಅಂದಾಜು 255 ಕೋಟಿ ರೂ.) ನೀಡಿ ಖರೀದಿಸಲು ಮುಂದಾಗಿದೆ.

ಕ್ಯಾಲಿಫೋರ್ನಿಯಾ ಮೂಲದ ಸೆನ್ಸ್ಹಾಕ್ 2018ರಲ್ಲಿ ಸ್ಥಾಪನೆಯಾಗಿದ್ದು, ಸೌರ ಶಕ್ತಿ ಉದ್ಯಮಕ್ಕೆ ಸಾಫ್ಟ್ವೇರ್ ಆಧಾರಿತ ನಿರ್ವಹಣಾ ಸಾಧನಗಳನ್ನು ಡೆವಲಪ್ ಮಾಡುವ ಕಂಪನಿಯಾಗಿದೆ.

ಶೇ.79.4 ಷೇರು ಖರೀದಿ ಸಂಬಂಧ ರಿಲಯನ್ಸ್ ಇಂಡಸ್ಟ್ರೀಸ್ ಸೆನ್ಸ್ಹಾಕ್ ಒಪ್ಪಂದ ಮಾಡಿಕೊಂಡಿದೆ. 2022, 2021 ಮತ್ತು 2022 ರ ಹಣಕಾಸು ವರ್ಷದಲ್ಲಿ ಸೆನ್ಸ್ಹಾಕ್ ಕ್ರಮವಾಗಿ 23,26,369 ಡಾಲರ್, 11,65,926 ಡಾಲರ್ ಮತ್ತು 12,92,063 ಡಾಲರ್ ಆದಾಯ ಗಳಿಸಿದೆ ಎಂದು ರಿಲಯನ್ಸ್ ತಿಳಿಸಿದೆ. 

ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತೊಡಗಿದೆ. ರಿಲಯನ್ಸ್ನ ಸುಮಾರು ಶೇ.60 ರಷ್ಟು ಆದಾಯವು ತೈಲ-ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ಉದ್ಯಮದಿಂದ ಬರುತ್ತದೆ.

ತೈಲ ಸಂಸ್ಕರಣೆಯ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ರಿಲಯನ್ಸ್ ಚಿಲ್ಲರೆ ವ್ಯಾಪಾರ, ದೂರಸಂಪರ್ಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ