ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ!

ಸೋಮವಾರ, 29 ಆಗಸ್ಟ್ 2022 (12:26 IST)
ನವದೆಹಲಿ : ಈ ತಿಂಗಳ ಆರಂಭದಲ್ಲಷ್ಟೇ ಕಾರ್ಯಾಚರಣೆ ಆರಂಭಿಸಿದ್ದ ದೇಶೀಯ ವಿಮಾನಯಾನ ಸಂಸ್ಥೆ ಆಕಾಶ ಏರ್ನ ಡೇಟಾಗೆ ಹ್ಯಾಕರ್ಗಳು ಕನ್ನ ಹಾಕಿರುವುದಾಗಿ ವರದಿಯಾಗಿದೆ.

ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ. ಸಂಸ್ಥೆಯ ಲಾಗ್ಇನ್ ಹಾಗೂ ಸೈನ್ ಅಪ್ ಸೇವೆಗಳಿಗೆ ಸಂಬಂಧಿಸಿದ ದೋಷಗಳು ಉಂಟಾಗಿರುವುದು ತಿಳಿದುಬಂದಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ.

ಇದರ ಪರಿಣಾಮವಾಗಿ ಪ್ರಯಾಣಿಕರ ಹೆಸರು, ಲಿಂಗ, ಇ-ಮೇಲ್ ವಿಳಾಸ ಹಾಗೂ ಫೋನ್ ನಂಬರ್ಗಳು ಸೋರಿಕೆಯಾಗಿವೆ. ಈ ವಿವರಗಳನ್ನು ಹೊರತುಪಡಿಸಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಗಳು ಅಥವಾ ಪಾವತಿಯ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಕಂಪನಿ ಖಚಿತಪಡಿಸಿದೆ. .

ಡೇಟಾ ಸೋರಿಕೆ ಬಗ್ಗೆ ನಮಗೆ ತಿಳಿದು ಬಂದ ತಕ್ಷಣವೇ ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಂಡು ಅನಧಿಕೃತ ಪ್ರವೇಶವನ್ನು ನಿಲ್ಲಿಸಿದ್ದೇವೆ. ಹೆಚ್ಚಿನ ಭದ್ರತೆಗಳನ್ನು ಸೇರಿಸಿ, ಈಗ ನಾವು ಲಾಗ್ ಇನ್ ಹಾಗೂ ಸೈನ್ ಅಪ್ ಸೇವೆಗಳನ್ನು ಪುನರಾರಂಭಿಸಿದ್ದೇವೆ ಎಂದು ಕಂಪನಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ