ಒಬ್ಬ ವ್ಯಕ್ತಿಯನ್ನು ಪಕ್ಷಕ್ಕಿಂತ ಹೆಚ್ಚು ಎಂದು ತೋರಿಸುವುದು ಸರಿಯಲ್ಲ: ಕಾಂಗ್ರೆಸ್

ಮಂಗಳವಾರ, 7 ನವೆಂಬರ್ 2023 (10:01 IST)
ಬಿಜೆಪಿ ಪಕ್ಷ ಒಬ್ಬ ವ್ಯಕ್ತಿಯನ್ನು ಪಕ್ಷಕ್ಕಿಂತ ಹೆಚ್ಚು ಎಂದು ತೋರಿಸುತ್ತಿದೆ.  ಇದೀಗ ತಕ್ಕ ಪಾಠ ಕಲಿತಿದೆ. ಪ್ರಜಾಪ್ರಭುತ್ವದಂತಹ ದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಪಕ್ಷಕ್ಕಿಂತ ಹೆಚ್ಚು ಎಂದು ತೋರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
 
ನರೇಂದ್ರ ಮೋದಿಯವರನ್ನು ಪಕ್ಷಕ್ಕಿಂತ ಹೆಚ್ಚು ಎಂದು ಬಿಂಬಿಸಿ ತಪ್ಪೇಸಗುತ್ತಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ತನ್ನ ಕೃತ್ಯಕ್ಕೆ ತಕ್ಕ ಪ್ರಾಯಶ್ಚಿತವಾಗಲಿದೆ ಎಂದು  ಹೇಳಿದ್ದಾರೆ.
 
ದೇಶದಲ್ಲಿ ರಾಷ್ಟ್ರಾಧ್ಯಕ್ಷರಿಂದ ಅಧಿಕಾರ ನಡೆಯುತ್ತಿಲ್ಲ. ಬಿಜೆಪಿಯ ಪ್ರತಿಯೊಬ್ಬ ನಾಯಕರು ರಾಷ್ಟ್ರಪತಿಗಳ ನೇಮಕ ಮಾಡುತ್ತಿರುವಂತೆ ವರ್ತಿಸಿ ರಾಷ್ಟ್ರಪತಿಗಳನ್ನು ಕಾರ್ಯದರ್ಶಿಗಳಾಗುವಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
 
ಆರೆಸ್ಸೆಸ್ ಸಿದ್ಧಾಂತವನ್ನು ಮೋದಿ ಪ್ರತಿಪಾದಿಸುತ್ತಿದ್ದಾರೆ. ನನ್ನ ಪ್ರಕಾರ ಬಿಜೆಪಿಗಿಂತಲು ಆರೆಸ್ಸೆಸ್‌ ಸಿದ್ಧಾಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
 
ಮೋದಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳುವುದರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಉತ್ತರಾಖಂಡ್‌ನಲ್ಲಿ 15 ಸಾವಿರ ಗುಜರಾತಿಗಳನ್ನು ರಕ್ಷಿಸಿದ್ದೇನೆ ಎಂದರು. ನಂತರ ಪಂಡಿತ್ ಜವಾಹರಲಾಲ್ ನೆಹರು ಸರ್ಧಾರ್ ವಲ್ಲಭ ಭಾಯಿ ಪಟೇಲ್‌ರ ಅಂತ್ಯಕ್ರಿಯೆಯಲ್ಲಿ ಬಾಗವಹಿಸಿರಲಿಲ್ಲ ಎಂದು ಆರೋಪಿಸಿದರು. ಚಂದ್ರಗುಪ್ತಾ ಗುಪ್ತಾ ವಂಶಜನೆಂದು ಹೇಳಿದರು. ಅಲೆಕ್ಸಾಂಡರ್ ಗಂಗಾ ನದಿಯನ್ನು ದಾಟಿದ್ದನು ಎಂದು ಹೇಳಿದರೂ ಎಲ್ಲಾ ಸಂಗತಿಗಳು ಸತ್ಯಕ್ಕೆ ದೂರವಾಗಿವೆ ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಪಿ.ಚಿದಂಬರಂ ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ