ಗೋವಾದಲ್ಲಿ ಮುಂಜಾನೆಯಿಂದ ಮಂಜು ಮುಸುಕಿದ ವಾತಾವರಣವಿದ್ದರಿಂದ ಪುಟಿನ್ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಸುಮಾರು 15 ನಿಮಿಷ, ವಿಮಾನ ನಿಲ್ದಾಣದಲ್ಲಿ ನಿಂತಿದ್ದಾಗ ಪುಟಿನ್ ಅದರಲ್ಲಿ ಕುಳಿತಿದ್ದರು. ಬಳಿಕ ವಿಮಾನ ಗೋವಾದತ್ತ ತೆರಳಿದೆ. ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.
ಇಂದಿನಿಂದ ಎರಡು ದಿನಗಳ ಕಾಲ ಗೋವಾದ ರಾಜಧಾನಿ ಪಣಜಿಯಲ್ಲಿ ಐದು ರಾಷ್ಟ್ರಗಳನ್ನೊಳಗೊಂಡ 8ನೇ ಬ್ರಿಕ್ಸ್ ಸಮಾವೇಶ ಆರಂಭವಾಗುತ್ತಿದ್ದು, ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ. ರಾಜತಾಂತ್ರಿಕ ಸಂಬಂಧ ವೃತ್ತಿ, ವ್ಯಾಪಾರ ಹಾಗೂ ಹೂಡಿಕೆಯಲ್ಲಿ ಹೆಚ್ಚಳ ಮತ್ತು ಭಯೋತ್ಪಾದನೆ ಸೇರಿದಂತೆ ಅನೇಕ ವಿಷಯಗಳು ಸಮಾವೇಶದಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.