ಬಂಗಾಳದ ಶಾಸಕ, ಮಂತ್ರಿಗಳಿಗೆ ಸಂಬಳ ಬಂಪರ್ ಹೆಚ್ಚಳ

ಶನಿವಾರ, 9 ಸೆಪ್ಟಂಬರ್ 2023 (08:09 IST)
ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದ ಸಚಿವರು, ಕ್ಯಾಬಿಬೆಟ್ ಮಂತ್ರಿಗಳ ಮಾಸಿಕ ವೇತನವನ್ನು ಬಂಪರ್ ಹೆಚ್ಚಳ ಮಾಡಿದ್ದಾರೆ. ಆದರೂ ಬ್ಯಾನರ್ಜಿ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ.
 
ಬಂಗಾಳದ ಸಚಿವರು ಹಾಗೂ ಮಂತ್ರಿಗಳ ಮಾಸಿಕ ವೇತನವನ್ನು ಪ್ರತಿ ವರ್ಗಕ್ಕೆ 40,000 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳದಿಂದ ಶಾಸಕರಿಗೆ ಮಾಸಿಕವಾಗಿ 10,000 ರೂ. ಬದಲು 50,000 ರೂ. ಆಗಿದೆ. ಅದೇ ರೀತಿ ಮಂತ್ರಿಗಳಿಗೆ 10,900 ರೂ. ಬದಲು 50,900 ರೂ. ನೀಡಲಾಗುತ್ತದೆ.

ಸಂಪುಟದ ಸಚಿವರಾದರೆ ವೇತನ 11,000 ರೂ. ನಿಂದ 51,000 ರೂ. ಹೆಚ್ಚಳವಾಗಿದೆ. ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಶಾಸಕರು ಮಾಸಿಕ ವೇತನದ ಜೊತೆಗೆ ಅರ್ಹರಾಗಿರುವ ಇತರ ಹೆಚ್ಚುವರಿ ಸವಲತ್ತುಗಳು ಮತ್ತು ಭತ್ಯೆಗಳು ಹಿಂದೆ ಇದ್ದಂತೆಯೇ ಮುಂದುವರಿಯಲಿದೆ. 

ಇದರರ್ಥ ಶಾಸಕರು ಪಡೆಯುವ ನಿಜವಾದ ಮಾಸಿಕ ಪಾವತಿಯೊಂದಿಗೆ ಸಂಬಳ, ಭತ್ಯೆಗಳು ಮತ್ತು ಸವಲತ್ತುಗಳು ಈಗ ಮಾಸಿಕವಾಗಿ 81,000 ರೂ.ಗಳಿಂದ 1.21 ಲಕ್ಷ ರೂ.ಗೆ ಹೆಚ್ಚಾಗುತ್ತದೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಇನ್ನು ಮುಂದೆ ಸಚಿವರು ಪಡೆಯುವ ನಿಜವಾದ ಮಾಸಿಕ ವೇತನವನ್ನು ತಿಂಗಳಿಗೆ 1.10 ಲಕ್ಷ ರೂ.ಗಳಿಂದ ತಿಂಗಳಿಗೆ ಸುಮಾರು 1.50 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ