ತನಗೆ ವೇತನ ಬೇಡ ಎಂದ ಮಮತಾ ಬ್ಯಾನರ್ಜಿ

ಶುಕ್ರವಾರ, 8 ಸೆಪ್ಟಂಬರ್ 2023 (11:27 IST)
ಮಮತಾ ಬ್ಯಾನರ್ಜಿ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಈ ಹಿಂದಿನಿಂದಲೂ ಸಿಎಂ ಸ್ಥಾನಕ್ಕೆ ವೇತನವನ್ನು ಪಡೆಯದ ಹಿನ್ನೆಲೆ ತನಗೆ ಯಾವುದೇ ವೇತನ ಬೇಡ ಎಂದು ಹೇಳಿದ್ದಾರೆ.

ಗುರುವಾರ ರಾಜ್ಯ ವಿಧಾನಸಭೆಯಲ್ಲಿ ವರ್ಧಿತ ವೇತನವನ್ನು ಘೋಷಿಸಿದ ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಶಾಸಕರ ವೇತನ ಭಾರತದ ಇತರ ರಾಜ್ಯಗಳ ಶಾಸಕರಿಗೆ ಹೋಲಿಸಿದರೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸಂಪುಟದ ಸಚಿವರಾದರೆ ವೇತನ 11,000 ರೂ. ನಿಂದ 51,000 ರೂ. ಹೆಚ್ಚಳವಾಗಿದೆ. ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಶಾಸಕರು ಮಾಸಿಕ ವೇತನದ ಜೊತೆಗೆ ಅರ್ಹರಾಗಿರುವ ಇತರ ಹೆಚ್ಚುವರಿ ಸವಲತ್ತುಗಳು ಮತ್ತು ಭತ್ಯೆಗಳು ಹಿಂದೆ ಇದ್ದಂತೆಯೇ ಮುಂದುವರಿಯಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ