ಅಘೋರಿ ಪೂಜೆಗಾಗಿ ಮಹಿಳೆಯ ಮುಟ್ಟಿನ ರಕ್ತ ಮಾರಾಟ !

ಶನಿವಾರ, 11 ಮಾರ್ಚ್ 2023 (13:32 IST)
ಮುಂಬೈ : ಮಹಿಳೆಯ ಪತಿ ಮತ್ತು ಅತ್ತೆ, ಮಾವ ಸೇರಿ ಆಕೆಯ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಅಘೋರಿ ಪೂಜೆ ಮಾಡುವವರಿಗೆ 50 ಸಾವಿರ ರೂ.ಗೆ ಮಾರಾಟ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 28 ವರ್ಷದ ಮಹಿಳೆಗೆ ಆಕೆಯ ಪತಿ ಹಾಗೂ ಆತನ ಕುಟುಂಬದವರು ಮದುವೆಯಾದಾಗಿನಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು.

ಅಷ್ಟೇ ಅಲ್ಲದೇ ಆಕೆಯ ಪತಿ, ಸೋದರಮಾವ, ಸೋದರಳಿಯ ಹಾಗೂ ನೆರೆಹೊರೆಯವರು ಸೇರಿ ಅಘೋರಿ ಪೂಜೆ ಮಾಡಲು ಮಹಿಳೆಯ ಮುಟ್ಟಿನ ರಕ್ತವನ್ನು ಬಲವಂತವಾಗಿ ತೆಗೆದುಕೊಂಡು ಬಾಟಲಿನಲ್ಲಿ ತುಂಬಿದ್ದಾರೆ. ಘಟನೆಯ ಬಗ್ಗೆ ಮಹಿಳೆಯು ಪುಣೆಯಲ್ಲಿರುವ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆಕೆಯ ದೂರಿನ ಮೇರೆಗೆ ಅತ್ತೆ, ಮಾವ, ಸಹೋದಳಿಯ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೀಡ್ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಮಾತನಾಡಿ, ಆರೋಪಿಗಳು ಸಂತ್ರಸ್ತ ಮಹಿಳೆಯ ಋತುಚಕ್ರದ ರಕ್ತವನ್ನು ತೆಗೆದುಕೊಂಡು ಅಘೋರಿ ಪೂಜೆಗಾಗಿ 50,000 ರೂ.ಗೆ ಮಾರಾಟ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ