ಸಲಿಂಗ ವಿವಾಹ : ಮಸೂದೆಗೆ ಅಮೆರಿಕ ಸೆನೆಟ್ ಅಂಗೀಕಾರ
ಮಸೂದೆ ಅಂಗೀಕಾರಕ್ಕೆ 60 ಮತಗಳ ಅಗತ್ಯವಿದ್ದು, ಸೆನೆಟ್ 61-36 ಮತಗಳಲ್ಲಿ ಸಲಿಂಗ ಹಾಗೂ ಅಂತರ್ಜಾತಿ ವಿವಾಹ ಕಾಯಿದೆಯನ್ನು ರಕ್ಷಿಸುವ ಮಸೂದೆಯನ್ನು ಅಂಗೀಕರಿಸಿತು.
ಸೆನೆಟ್ನ ಅನುಮೋದನೆ ಎರಡೂ ಪಕ್ಷಗಳು ಒಮ್ಮತದಿಂದ ನಿರ್ಧರಿಸಿವೆ. ರಿಪಬ್ಲಿಕನ್ ಹಾಗೂ ಡೆಮೋಕ್ರಾಟ್ ಪಕ್ಷಗಳು ಒಟ್ಟಾಗಿಯೇ ಅಂತರ್ಜಾತಿ ಹಾಗೂ ಸಲಿಂಗ ವಿವಾಹದ ಹಕ್ಕನ್ನು ಬೆಂಬಲಿಸಿವೆ.
ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಂದು ಉಭಯಪಕ್ಷೀಯ ನಿರ್ಧಾರದೊಂದಿಗೆ ಸೆನೆಟ್ ಮದುವೆ ಕಾಯಿದೆಯನ್ನು ಅಂಗೀಕರಿಸಿದೆ.