ದಿನಕರನ್ ಮತ್ತು 18 ಅನರ್ಹ ಶಾಸಕರ ವಿರುದ್ಧ ದೇಶದ್ರೋಹ ಕೇಸ್ ದಾಖಲು

ಸೋಮವಾರ, 2 ಅಕ್ಟೋಬರ್ 2017 (19:45 IST)
ಅಣ್ಣಾಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ್ರೋಹ ಆರೋಪದಡಿ ಟಿಟಿವಿ ದಿನಕರನ್ ವಿರುದ್ಧ ಕೇಸ್ ದಾಖಲಾಗಿದೆ.

ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ನೇತೃತ್ವದ ಸರ್ಕಾರ ಕಿಲ್ಲರ್ ಸರ್ಕಾರವೆಂದು ಟಿಟಿವಿದಿನಕರನ್ ಬೆಂಬಲಿಗರು ಕರ ಪತ್ರ ಮುದ್ರಿಸಿ ಹಂಚಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಿನಕರನ್ ಸೇರಿ ಶಶಿಕಲಾ ಬಣದ 10 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 124(ಎ)ರಡಿ ಕೇಸ್ ದಾಖಲಿಸಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಸೇಲಂನ ಅನ್ನದಾನಪಟ್ಟಿ ಪೊಲೀಸ್ ಠಾಣೆಯಲ್ಲಿ ಕೆ.ಆರ್.ಎಸ್. ಸರವಣನ್ ಎಂಬಾತ ದೂರು ದಾಖಲಿಸಿದ್ದ. ಸೆಪ್ಟೆಂಬರ್ 29ರಂದು ದಿನಕರನ್ ಬೆಂಬಲಿಗರು ಸರ್ಕಾರದ ವಿರುದ್ಧ ಪಾಂಪ್ಲೇಟ್ ಹಂಚಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ನೀಟ್ ಬಗ್ಗೆ ತಪ್ಪು ಮಾಹಿತಿ ಮುದ್ರಿಸಿ ಸರ್ಕಾರದ ವಿರುದ್ಧ ಜನರನ್ನ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆಂದೂ ದೂರಿನಲ್ಲಿ ಆರೋಪಿಸಲಾಗಿತ್ತು.ಇತ್ತೀಚೆಗೆ ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಂಡಿದ್ದ 18 ಶಾಸಕರು ಸಹ ೀ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ