ಪತ್ನಿಗೆ ಸೀರೆ ಉಡಲು ಬರಲ್ಲವೆಂದು ಪತಿ ಏನ್ ಮಾಡ್ದ ನೋಡಿ?
ಮುಕುಂದನಗರದ ನಿವಾಸಿ ಸಮಾಧಾನ್ ಸಾಬಲ್(34) ಮೃತ ವ್ಯಕ್ತಿ. ಸಾಬಲ್ 6 ತಿಂಗಳ ಹಿಂದೆ ಅವನಿಗಿಂತ 6 ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಆದರೆ ಈ ಮದುವೆಯಿಂದ ಆತ ಖುಷಿಯಾಗಿರಲಿಲ್ಲ.
ಸಾಬಲ್ ಪತ್ನಿಯ ಮೇಲೆ ಅಸಮಾಧಾನಗೊಂಡಿದ್ದನು. ಪತ್ನಿಗೆ ಸರಿಯಾಗಿ ಸೀರೆ ಉಡಲು ಬರುವುದಿಲ್ಲ. ಇದರ ಜೊತೆಗೆ ಸರಿಯಾಗಿ ನಡೆಯಲು ಮತ್ತು ಮಾತನಾಡಲು ಬರುವುದಿಲ್ಲ ಎಂದು ಮನನೊಂದಿದ್ದನು. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ.
ಸಾಬಾಲ್ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲಿ ಡೆತ್ನೋಟ್ ಪತ್ತೆಯಾಗಿದೆ.