ಅತಿಯಾಗಿ ನೀರು ಕುಡಿದು ಆಸ್ಪತ್ರೆ ಸೇರಿದ ಮಹಿಳೆ

Krishnaveni K

ಮಂಗಳವಾರ, 24 ಡಿಸೆಂಬರ್ 2024 (16:49 IST)
ಹೈದರಾಬಾದ್: ಆರೋಗ್ಯವಾಗಿರಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಈ ಮಹಿಳೆಯ ವಿಚಾರದಲ್ಲು ಅದೇ ಆಗಿದೆ.

ಹೈದರಾಬಾದ್ ನಲ್ಲಿ ಮಹಿಳೆಯೊಬ್ಬಳು ಅತಿಯಾಗಿ ನೀರು ಕುಡಿದು ಆಸ್ಪತ್ರೆ ಸೇರುವಂತಾಗಿದೆ. ಪ್ರತಿನಿತ್ಯ 2-3 ಲೀಟರ್ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸ. ಆದರೆ ಈ ಮಹಿಳೆ ಬೆಳಿಗ್ಗೆ ಎದ್ದ ತಕ್ಷಣ 4 ಲೀಟರ್ ನೀಡು ಸೇವನೆ ಮಾಡುತ್ತಿದ್ದಳಂತೆ.

ಖಾಲಿ ಹೊಟ್ಟೆಯಲ್ಲಿ ನೀರು ಸೇವನೆ ಮಾಡಬೇಕು ಎಂಬುದನ್ನು ಈ ಮಹಿಳೆ ತಪ್ಪಾಗಿ ಭಾವಿಸಿದಂತಿದೆ. 40 ವರ್ಷದ ಮಹಿಳೆ 4 ಲೀಟರ್ ನೀರು ಕುಡಿದು ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರುವಂತಾಗಿದೆ. ಅತಿಯಾಗಿ ನೀರು ಕುಡಿದ ಪರಿಣಾಮ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ನೀರು ಸೇವನೆ ಮಾಡುವುದು ಉತ್ತಮವೇ. ಆದರೆ ಹೀಗೆ ಏಕಾಏಕಿ ಇಷ್ಟೊಂದು ಪ್ರಮಾಣದಲ್ಲಿ ನಿರು ಕುಡಿಯಲು ಹೋಗಿದ್ದು ಮಹಿಳೆಗೆ ಎರವಾಗಿದೆ. ಅತಿಯಾಗಿ ನೀರು ಸೇವನೆಯಿಂದ ವಾಕರಿಕೆ, ತಲೆನೋವು ಮುಂತಾದ ಸಮಸ್ಯೆಯಿಂದ ಮಹಿಳೆ ಬಳಲುತ್ತಿದ್ದಳು. ನೀರು ಹೆಚ್ಚು ಕುಡಿದಿದ್ದರಿಂದ ಹೈಪರ್ ಹೈಡ್ರೇಷನ್ ಆಗಿ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಆಕೆಗೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ