ಬಿಜೆಪಿ ಸಂಸದನ ಕಾಮ‌ಪುರಾಣ ಬಹಿರಂಗ

geetha

ಸೋಮವಾರ, 4 ಮಾರ್ಚ್ 2024 (17:01 IST)
ಉತ್ತರಪ್ರದೇಶ :ಉತ್ತರಪ್ರದೇಶದ ಬಾರಾಬಂಕಿ ಕ್ಷೇತ್ರದ ಸಂಸದರಾಗಿರುವ ಉಪೇಂದ್ರ ಸಿಂಗ್‌ ರಾವತ್‌  ಅವರಿಗೆ ಟಿಕೆಟ್‌ ಘೋಷಣೆಯಾದ ಮರುದಿನವೇ ಅಶ್ಲೀಲ ವಿಡಿಯೋ  ಹೊರಬಿದ್ದಿದೆ. ಬಿಜೆಪಿ ಸಂಸದ ಉಪೇಂದ್ರ ಸಿಂಗ್‌ ರಾವತ್‌ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. 
 
ವಿಡಿಯೋ ಸತ್ಯಾಸತ್ಯತೆ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಂಸದರ ಆಪ್ತ ಕಾರ್ಯದರ್ಶಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಉಪೇಂದ್ರ ಸಿಂಗ್‌ ರಾವತ್‌, ನನಗೆ ಟಿಕೆಟ್‌ ದೊರೆತ ತಕ್ಷಣ ನನ್ನ ರಾಜಕೀಯ ವಿರೋಧಿಗಳು ಈ ರೀತಿಯ ಹೀನಕೃತ್ಯ ಎಸೆಗಿದ್ದಾರೆ. ಇದರಲ್ಲಿ ತೇಜೋವಧೆ ಬಿಟ್ಟರೆ ಯಾವುದೇ ಉದ್ದೇಶವಿಲ್ಲ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ