ಉದ್ಧವ್ ಠಾಕ್ರೆಯೇ ಮಹಾರಾಷ್ಟ್ರಕ್ಕೆ ನೂತನ ಸಿಎಂ: ತಡರಾತ್ರಿವರೆಗೂ ನಡೆದ ಮೀಟಿಂಗ್

ಶುಕ್ರವಾರ, 22 ನವೆಂಬರ್ 2019 (09:18 IST)
ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆಗೂಡಿ ಸರ್ಕಾರ ರಚಿಸುವ ಕುರಿತಾಗಿ ನಿನ್ನೆ ಕಾಂಗ್ರೆಸ್ ಮತ್ತು ಎನ್ ಸಿಪಿ ತಡರಾತ್ರಿವರೆಗೆ ಸಭೆ ನಡೆಸಿದ್ದು, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಸಿಎಂ ಆಗಲಿ ಎಂಬ ಅಭಿಪ್ರಾಯಕ್ಕೆ ಬಂದಿವೆ.

 
ಇಂದು ಮಹಾ ಡ್ರಾಮಕ್ಕೆ ಅಂತಿಮ ತೆರೆ ಬೀಳುವ ನಿರೀಕ್ಷೆಯಿದೆ. ನಿನ್ನೆ ಸೋನಿಯಾ ಗಾಂಧಿ ಹಾಗೂ ಶರದವ್ ಪವಾರ್ ಸೇರಿದಂತೆ ಎನ್‍ ಸಿಪಿ, ಕಾಂಗ್ರೆಸ್ ನಾಯಕರು ಸುದೀರ್ಘ ಚರ್ಚೆ ನಡೆಸಿ ಉದ್ಧವ್ ಠಾಕ್ರೆಯೇ ಮುಖ್ಯಮಂತ್ರಿ ಆದರೆ ನಮಗೆ ಅಭ್ಯಂತರವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇಂದು ಶಿವಸೇನೆ ಜತೆ ಎರಡೂ ಪಕ್ಷಗಳ ನಾಯಕರು ಇನ್ನೊಮ್ಮೆ ಚರ್ಚೆ ನಡೆಸಲಿದ್ದಾರೆ. ಉದ್ಧವ್ ಠಾಕ್ರೆಯೇ ಸಿಎಂ ಎಂಬ ತೀರ್ಮಾನಕ್ಕೆ ಈ ಮೂಲಕ ಅಂತಿಮ ಮುದ್ರೆ ಬೀಳಲಿದೆ. ಹೀಗಾದಲ್ಲಿ ಎರಡು ದಿನಗಳಲ್ಲಿ ಉದ್ಧವ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ