ಬೆಳ್ಳಂಬೆಳಗ್ಗೆ ಪಿ.ಚಿದಂಬರಂಗೆ ಶಾಕ್ ಕೊಟ್ಟ ಸಿಬಿಐ!
ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ಮುಂಬೈ, ತಮಿಳುನಾಡಿನ 7 ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 2010-14ರ ಅವಧಿಯಲ್ಲಿ ವಿದೇಶಿ ಹಣ ರವಾನೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಚಿದಂಬರಂ ವಿರುದ್ಧ ಹೊಸದಾಗಿ ಪ್ರಕರಣ ದಾಖಲಿಸಿದೆ.
ದೆಹಲಿ, ತಮಿಳುನಾಡು, ಚೆನ್ನೈ ಹಾಗೂ ಶಿವಗಂಗೈನಲ್ಲಿರುವ ಚಿದಂಬರಂ ಅವರ ಮನೆ, ಕಚೇರಿಗಳ ಮೇಲೆ ಮಂಗಳವಾರ ಸಿಬಿಐ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ.