ಐಪಿಎಲ್ 2022: ಡೆಲ್ಲಿ ಗೆಲ್ಲಿಸಿದ ಮಾರ್ಷ್, ಶ್ರಾದ್ಧೂಲ್ ಠಾಕೂರ್
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸರ್ಫರಾಜ್ ಖಾನ್ 32, ಮಿಚೆಲ್ ಮಾರ್ಷ್ 63, ಲಲಿತ್ ಯಾದವ್ 24 ರನ್ ಗಳಿಸಿದರು. ಡೇವಿಡ್ ವಾರ್ನರ್ ಗೋಲ್ಡನ್ ಡಕ್ ಔಟಾದರು.
ಈ ಸುಲಭ ಮೊತ್ತವನ್ನು ಡೆಲ್ಲಿ ಬೆನ್ನಟ್ಟಬಹುದು ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಮಧ್ಯಮ ಕ್ರಮಾಂಕ ಕೈಕೊಟ್ಟಿದ್ದು ತಂಡಕ್ಕೆ ಪೆಟ್ಟು ನೀಡಿತು. ಜಾನಿ ಬೇರ್ ಸ್ಟೋ 28, ಶಿಖರ್ ಧವನ್ 19, ಜಿತೇಶ್ ಶರ್ಮಾ 44, ರಾಹುಲ್ ಚಹರ್ 25 ರನ್ ಗಳಿಸಿದರು. ಮಾರಕ ದಾಳಿ ಸಂಘಟಿಸಿದ ಶ್ರಾದ್ಧೂಲ್ ಠಾಕೂರ್ 4 ವಿಕೆಟ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.