ನವದೆಹಲಿ: ಫೇಸ್ ಬುಕ್ ಬಳಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನಿಮಗೊಂದು ಶಾಕಿಂಗ್ ಸುದ್ದಿ! ಸ್ವತಃ ಫೇಸ್ ಬುಕ್ ಸಂಸ್ಥೆ 30 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದನ್ನು ಒಪ್ಪಿಕೊಂಡಿದೆ.
ಇದರಲ್ಲಿ ಅರ್ಧದಷ್ಟು ಅಂದರೆ 14 ಮಿಲಿಯನ್ ಬಳಕೆದಾರರ ವೈಯಕ್ತಿಕ ದಾಖಲೆಗಳು, ಮಾಹಿತಿಗಳಿಗೆ ಸಮಸ್ಯೆಯಾಗಿದೆಯಂತೆ. ಹೀಗಾಗಿ ಇದೀಗ ಫೇಸ್ ಬುಕ್ ಸಂಸ್ಥೆ ಮಾಹಿತಿ ಸೋರಿಕೆಯಾದ ಬಳಕೆದಾರರಿಗೆ ಅವರ ಮಾಹಿತಿ ಸುರಕ್ಷಿತವಾಗಿಡಲು ಏನು ಮಾಡಬೇಕೆಂದು ಸಂದೇಶ ಕಳುಹಿಸುತ್ತಿದೆ.
ಆದರೆ ಫೇಸ್ ಬುಕ್ ಮೆಸೆಂಜರ್, ವ್ಯಾಟ್ಸಪ್, ಇನ್ ಸ್ಟಾಗ್ರಾಂ, ವರ್ಕ್ ಪ್ಲೇಸ್, ಮುಂತಾದ ಮೆಸೆಂಜರ್ ಆಪ್ ಗಳನ್ನು ಬಳಸುತ್ತಿದ್ದವರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.