ಮಹಿಳೆಯರು ಋತುಚಕ್ರದ ಪೂರ್ವ ಕೊರೋನಾ ವ್ಯಾಕ್ಸಿನ್ ಪಡೆಯಬಾರದೇ?
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಋತುಚಕ್ರಪೂರ್ವದ ದಿನಗಳಲ್ಲಿ ವ್ಯಾಕ್ಸಿನ್ ಪಡೆಯಬಾರದು ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸಂಪೂರ್ಣ ಸುಳ್ಳು. ಋತುಚಕ್ರದ ಐದು ದಿನ ಮೊದಲು ಮತ್ತು ನಂತರ ಮಹಿಳೆಯರಿಗೆ ಯಾವುದೇ ಸಮಸ್ಯೆಯಾಗದು. ಸುಳ್ಳು ಸುದ್ದಿಗೆ ಮರುಳಾಗಬೇಡಿ ಎಂದು ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.