5 ದಿನ ಸಿಸೋಡಿಯಾ ಸಿಬಿಐ ವಶಕ್ಕೆ

ಮಂಗಳವಾರ, 28 ಫೆಬ್ರವರಿ 2023 (07:05 IST)
ನವದೆಹಲಿ : ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ದೆಹಲಿ ನ್ಯಾಯಾಲಯ 5 ದಿನಗಳ ವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ.
 
ಸಿಸೋಡಿಯಾ ಅವರು ಮದ್ಯ ಮಾರಾಟಗಾರರಿಗೆ ಅನಗತ್ಯ ಪ್ರಯೋಜನಗಳನ್ನು ನೀಡುತ್ತಿದ್ದಾರೆ. ಅಕ್ರಮವಾಗಿ ರಿಯಾಯಿತಿಯನ್ನು ನೀಡುತ್ತಿದ್ದಾರೆ ಹಾಗೂ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಒಪ್ಪಿಗೆಯಿಲ್ಲದೇ ಅಬಕಾರಿ ನೀತಿಗಳನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ಬೆಳಗ್ಗೆಯಿಂದ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಅವರು ವಿಚಾರಣೆ ವೇಳೆ ಸರಿಯಾಗಿ ಸಹಕರಿಸದೇ ಹಾರಿಕೆಯ ಉತ್ತರಗಳನ್ನು ನೀಡಿರುವುದರಿಂದ ಅವರನ್ನು ಸಿಬಿಐ ಬಂಧಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ