ಐಪಿಎಸ್ ಪಾಸ್ ಮಾಡಿ ಪೇದೆ ಅಪ್ಪನಿಗೇ ಬಾಸ್ ಆದ ಪುತ್ರ!
ಜನಾರ್ಧನ ಸಿಂಗ್ ಎಂಬ ಪೊಲೀಸ್ ಪೇದೆ ಪುತ್ರ ಅನೂಪ್ ಸಿಂಗ್ ಐಪಿಎಸ್ ಪಾಸ್ ಮಾಡಿ ಇದೀಗ ಲಕ್ನೋದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ವಿಶೇಷವೆಂದರೆ ಇಲ್ಲಿಯೇ ಅನೂಪ್ ತಂದೆ ಜನಾರ್ಧನ ಸಿಂಗ್ ಕೂಡಾ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಲ್ಲಿದ್ದಾರೆ.
ಹೀಗಾಗಿ ಇದೀಗ ತಂದೆ ಜನಾರ್ಧನ ಸಿಂಗ್ ಪುತ್ರ ಅನೂಪ್ ಸಿಂಗ್ ಕೈಕೆಳಗೆ ಕೆಲಸ ಮಾಡಬೇಕಿದೆ. ನನ್ನ ಮಗನೇ ನನ್ನ ಹಿರಿಯ ಅಧಿಕಾರಿ ಎನ್ನಲು ನನಗೆ ಹೆಮ್ಮೆಯಾಗುತ್ತಿದೆ. ಒಬ್ಬ ಹಿರಿಯ ಅಧಿಕಾರಿಗೆ ಗೌರವ ಕೊಡುವಂತೆ ತನ್ನ ಮಗನಿಗೂ ಸೆಲ್ಯೂಟ್ ಮಾಡಿ ಗೌರವ ಸಲ್ಲಿಸುವುದಾಗಿ ತಂದೆ ಜನಾರ್ಧನ ಸಿಂಗ್ ಸಂತಸ ಹಂಚಿಕೊಂಡಿದ್ದಾರೆ.