ಟ್ವಿಟರ್ ಖಾತೆ ಸ್ಥಗಿತಗೊಳಿಸಿದ ಸೋನು ನಿಗಮ್

ಗುರುವಾರ, 25 ಮೇ 2017 (10:11 IST)
ಮುಂಬೈ: ಟ್ವಿಟರ್‌ ‘ಏಕಪಕ್ಷೀಯ’ವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಖ್ಯಾತ ಗಾಯಕ ಸೋನು ನಿಗಮ್‌, ತಮ್ಮ ಟ್ವಿಟರ್‌ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ.
 
ಟ್ವಿಟರ್‌ಗೆ ವಿದಾಯ ಹೇಳುವುದಕ್ಕೂ ಮುನ್ನ ಅವರು 24 ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಮಹಿಳೆಯರ ಕುರಿತಾಗಿ ಅವಾಚ್ಯವಾಗಿ ಟ್ವೀಟ್‌ ಮಾಡಿದ ಬಾಲಿವುಡ್‌ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ಅವರ ಖಾತೆಯನ್ನು ಟ್ವಿಟರ್‌ ಅಮಾನತು ಮಾಡಿದ ನಂತರ ಸೋನು ನಿಗಮ್‌ ಈ ನಿರ್ಧಾರ ಕೈಗೊಂಡಿದ್ದಾರೆ. 
 
ಜವಾಹರಲಾಲ್‌ ನೆಹರೂ ವಿವಿಯ (ಜೆಎನ್‌ಯು) ವಿದ್ಯಾರ್ಥಿ ಸಂಘಟನೆಯ ನಾಯಕಿ ಶೆಹ್ಲಾ ರಶೀದ್‌ ವಿರುದ್ಧ ಗಾಯಕ ಅಭಿಜಿತ್‌ ಮಾಡಿರುವ ಟ್ವೀಟ್‌ ಅನ್ನು ನಿಗಮ್‌ ಸಮರ್ಥಿಸಿದ್ದಾರೆ. ಅಭಿಜಿತ್‌ ಅವರು ಬಳಸಿದ ಭಾಷೆಯನ್ನು ಆಕ್ಷೇಪಿಸಬಹುದು. ಆದರೆ, ಬಿಜೆಪಿ ಲೈಂಗಿಕ ಜಾಲ ನಡೆಸುತ್ತಿದೆ ಎಂದು ಶೆಹ್ಲಾ ಮಾಡಿರುವ ಆರೋಪ ಪ್ರಚೋದನಾಕಾರಿಯಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ. 
 
ಒಂದು ವೇಳೆ, ಅಭಿಜಿತ್‌ ಅವರ ಖಾತೆಯನ್ನು ಸ್ಥಗಿತಗೊಳಿಸುತ್ತಾರೆ ಎಂದಾದರೆ, ಶೆಹ್ಲಾ ಅವರ ಖಾತೆ ಮತ್ತು ಪ್ರತೀ ಸಾಧಕರನ್ನು ತಾಯಿ, ಸಹೋದರಿಯರ ಹೆಸರು ಹೇಳಿ ನಿಂದಿಸುವವರ ಖಾತೆಗಳನ್ನು ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ