ಶತಮಾನದ ಸುದೀರ್ಘ ಚಂದ್ರ ಗ್ರಹಣ ನಾಳೆ: ಎಲ್ಲೆಲ್ಲಿ ಗೋಚರ?

ಗುರುವಾರ, 26 ಜುಲೈ 2018 (08:59 IST)
ಬೆಂಗಳೂರು: ನಾಳೆ ಶತಮಾನದ ಸುದೀರ್ಘ ಚಂದ್ರ ಗ್ರಹಣ ನಡೆಯಲಿದ್ದು, ಇಡೀ ವಿಶ್ವವೇ ಆಕಾಶದ ಕೌತುಕಕ್ಕೆ ಕುತೂಹಲದಿಂದ ಎದುರು ನೋಡುತ್ತಿದೆ.
 

1 ಗಂಟೆ 43 ನಿಮಿಷ ಕಾಲ ಗ್ರಹಣ ಪ್ರಕ್ರಿಯೆ ನಡೆಯಲಿದ್ದು, ಚಂದ್ರನು ಕೆಂಪು ವರ್ಣಕ್ಕೆ ತಿರುಗಲಿರುವ ವಿಚಿತ್ರ ವಿದ್ಯಮಾನವನ್ನು ವೀಕ್ಷಿಸಬಹುದಾಗಿದೆ. ಭಾರತದಲ್ಲಿ ಮೊದಲ ಭಾಗ ಮಾತ್ರ ಗೋಚರವಾಗಲಿದೆ. ಗ್ರಹಣ ಕಾಲದಲ್ಲಿ ಮಂಗಳ ಗ್ರಹವು ಭೂಮಿಗೆ ಹತ್ತಿರ ಬರುವುದರಿಂದ ಚಂದ್ರನು ಕೆಂಪಾಗಿ ಗೋಚರವಾಗಲಿದ್ದಾನೆ.

ಭಾರತದಲ್ಲಿ ದೆಹಲಿ, ಪುಣೆ, ಮುಂಬೈ ಮತ್ತು ಇತರ ನಗರಗಳಲ್ಲಿ ಗೋಚರವಾಗಲಿದೆ. ಭಾರತೀಯ ಕಾಲ ಮಾನ ಪ್ರಕಾರ ಮಧ್ಯ ರಾತ್ರಿ 11.44 ಕ್ಕೆ ಆರಂಭವಾಗಿ ಬೆಳಗಿನ ಜಾವ 4.58 ಕ್ಕೆ ಗ್ರಹಣ ಅಂತ್ಯವಾಗಲಿದೆ. ರಾತ್ರಿ 1 ಗಂಟೆಗೆ ಗ್ರಹಣ ಸ್ಪಷ್ಟವಾಗಿ ಗೋಚರವಾಗಬಹುದು ಎಂದು ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ