ಮಗ ಹಾಗೂ ಸೊಸೆಗೆ ಮಕ್ಕಳು ಆಗಲಿಲ್ಲವೆಂದು ಗೃಹಿಣಿಯ ಅತ್ತೆ, ಮಾವ ಮಾಡಬಾರದ ಕೆಲಸ ಮಾಡಿದ್ದಾರೆ.
ತಮ್ಮ ಮಗನಿಗೆ ಮಕ್ಕಳಾಗದಿರೋದನ್ನೇ ಮನಸ್ಸಿಗೆ ಹಚ್ಚಿಕೊಂಡ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೆಕ್ಯುರಿಟಿಯಾಗಿದ್ದ 50 ವರ್ಷದ ವ್ಯಕ್ತಿ ಹಾಗೂ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮದುವೆಯಾಗಿ ಎಂಟ್ಹತ್ತು ವರ್ಷಗಳ ಬಳಿಕವೂ ತಮ್ಮ ಮಗನಿಗೆ ಮಕ್ಕಳಾಗದಿರೋದಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.