ಬೆಂಗಳೂರು: ನಿನ್ನೆ ರಾತ್ರಿ ಸ್ಪೇಸ್ಶಿಪ್ಟು ಯೂನಿಟಿ (SpaceShipTwo Unity) ನೌಕೆ ಆರು ಗಗನಯಾತ್ರಿಗಳನ್ನ ಹೊತ್ತು ನಭಕ್ಕೆ ಹಾರಿ ಬಾಹ್ಯಾಕಾಶದಲ್ಲಿ ಒಂದು ಗಂಟೆ ವಿಹರಿಸಿ ಬಳಿಕ ಭೂಮಿಗೆ ವಾಪಸ್ ಬಂದಿತು. ಇದು ವಿಶ್ವದಲ್ಲೇ ಮೊದಲ ಬಾರಿಗೆ ಖಾಸಗಿಯಾಗಿ ನಡೆದ ಮೊದಲ ಬಾಹ್ಯಾಕಾಶ ಯಾನ.
ಸರ್ ರಿಚರ್ಡ್ ಬ್ರಾನ್ಸನ್ ಎಂಬ ಬ್ರಿಟಿಷ್ ಕೋಟ್ಯಾಧಿಪತಿ ಉದ್ಯಮಿಯ ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆ ನಡೆಸಿದ ಗಗನಯಾತ್ರೆ ಇದಾಗಿತ್ತು. ನ್ಯೂ ಮೆಕ್ಸಿಕೋದಿಂದ ಹೊರಟ ನೌಕೆ ಭೂಮಿಯಿಂದ 85 ಕಿಮೀ ಮೇಲೆ ಹಾರಿತು. ಗುರುತ್ವ ಶಕ್ತಿ ಇಲ್ಲದ ಅಷ್ಟು ಎತ್ತರದಲ್ಲಿನ ಅನುಭವ ಮತ್ತು ಅಲ್ಲಿಂದ ಭೂಮಿಯ ಸೊಬಗನ್ನ ಸವಿಯುವ ಅವಿಸ್ಮರಣೀಯ ಕ್ಷಣಗಳು ಐವರು ಗಗನಯಾತ್ರಿಗಳದ್ದಾಗಿತ್ತು. ಈ ಗಗನಯಾತ್ರೆಯಲ್ಲಿ ಸ್ವತಃ ಸರ್ ರಿಚರ್ಡ್ ಬ್ರಾನ್ಸನ್ ಅವರಿದ್ದದ್ದು ವಿಶೇಷ. ಐವತು ಯಾತ್ರಿಗಳ ಪೈಕಿ ಭಾರತ ಮೂಲದ ಶಿರಿಷಾ ಬಂಡ್ಲ ಕೂಡ ಇದ್ದರು. ಮಿಷನ್ ಪೂರ್ಣಗೊಂಡು ಭೂಮಿಗೆ ವಾಪಸ್ಸಾಗದ ಬಳಿಕ ಬ್ರಾನ್ಸನ್ ಅವರು ಶಿರಿಷಾರನ್ನ ಹೆಗಲ ಮೇಲೆ ಹೊತ್ತು ಸಾಗಿದ ಚಿತ್ರ ವೈರಲ್ ಕೂಡ ಆಗಿದೆ. ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತದ ಮೂಲದ ಮೂರನೇ ಮಹಿಳೆ ಎಂಬ ಹೆಸರು ಶಿರಿಷಾಗೆ ದಕ್ಕಿದೆ.
34 ವರ್ಷದ ಶಿರಿಷಾ ಬಂಡ್ಲ ಆಂಧ್ರದ ಪ್ರಕಾಶಂ ಜಿಲ್ಲೆಯ ಚಿರಾಲದಲ್ಲಿ ಜನಿಸಿ ಗುಂಟೂರಿನಲ್ಲಿ ಬಾಲ್ಯದ ಕೆಲ ವರ್ಷ ಕಳೆದರು. ಬಳಿಕ ತಂದೆ ತಾಯಿ ಜೊತೆ ಅಮೆರಿಕದಲ್ಲೇ ಬೆಳೆದ ಇವರು ಏರೋನಾಟಿಕಲ್ ವಿಷಯದಲ್ಲಿ ಬಿಎಸ್ಸಿ ಪದವಿ ಮಾಡಿ ಬಳಿಕ ಎಂಬಿಎ ಮಾಡಿದ್ದಾರೆ. ಇದೀಗ ಅವರು ಗಗನಯಾತ್ರಿಯಾಗಿ ರೂಪುಗೊಂಡಿದ್ದಾರೆ. ವರ್ಜಿನ್ ಗೆಲಾಕ್ಟಿಕ್ ಕಂಪನಿಯಲ್ಲಿ ಇವರು ಸರ್ಕಾರಿ ವ್ಯವಹಾರ ಮತ್ತು ಸಂಶೋಧನಾ ಕಾರ್ಯಾಚರಣೆ (
s ವಿಭಾಗದ ಉಪಾಧ್ಯಕ್ಷೆಯಾಗಿ ಉನ್ನತ ಹುದ್ದೆಯಲ್ಲಿದ್ದಾರೆ.
ಶಿರಿಷಾ ಅವರದ್ದು ಶಿಕ್ಷಿತರ ಕುಟುಂಬ. ಅವರ ತಂದೆ ಬಿ ಮುರಳೀಧರ್ ಮತ್ತು ತಾಯಿ ಅನುರಾಧಾ ಅವರು ಅಮೆರಿಕ ಸರ್ಕಾರದ ಸೇವೆಯಲ್ಲಿದ್ದಾರೆ. ಇವರ ಸಹೋದರಿ ಪ್ರತ್ಯುಷಾ ಬಂಡ್ಲ ಅವರೂ ಅಮೆರಿಕದಲ್ಲಿ ಬಯೋಲಾಜಿಕಲ್ ಸೈನ್ಸ್ ಟೆಕ್ನಿಷಿಯನ್ ಆಗಿದ್ಧಾರೆ. ಭಾರತದಲ್ಲಿರುವ ಶಿರಿಷಾ ಅವರ ಅಜ್ಜಂದಿರೂ ಕೂಡ ಉನ್ನತ ಹುದ್ದೆಯಲ್ಲಿದ್ದವರೇ. ಇವರ ತಾತ ಬಂಡ್ಲ ರಂಗಯ್ಯ ಅವರು ಆಚಾರ್ಯ ಎನ್ ಜಿ ರಂಗ ಕೃಷಿ ವಿವಿಯಲ್ಲಿ ಮುಖ್ಯ ವಿಜ್ಞಾನಿಯಾಗಿದ್ದರು. ಇವರ ತಾಯಿಯ ತಂದೆ ವೆಂಕಟ ನರಸಯ್ಯ ಅವರು ಪ್ರಕಾಶಂ ಜಿಲ್ಲೆಯವರಾಗಿದ್ದು ಅವರೂ ಕೂಡ ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದರು.