48 ಗಂಟೆಯೊಳಗೆ ಕೇರಳ ಪ್ರವೇಶಿಸಲಿರುವ ಮುಂಗಾರು

ಮಂಗಳವಾರ, 7 ಜೂನ್ 2016 (10:26 IST)
ಮುಂದಿನ 48 ಗಂಟೆಗಳಲ್ಲಿ ಮುಂಗಾರು ಮಳೆ ಕೇರಳವನ್ನು ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
 
ನೈರುತ್ಯ ಮುಂಗಾರು ಪ್ರವೇಶಕ್ಕೆ ಎಲ್ಲಾ ರೀತಿಯ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು ಗುರುವಾರದೊಳಗೆ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಜೂನ್ 10 ರಂದು ಕೇರಳ ಮತ್ತು ಲಕ್ಷದ್ವೀಪವನ್ನು ಮಳೆ ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ.
 
ಮುಂಗಾರು ಕೇರಳ ಪ್ರವೇಶಿದ ಒಂದೆರಡು ದಿನಗಳಲ್ಲಿ ಕರ್ನಾಟಕವನ್ನು ಪ್ರವೇಶಿಸುವುದು ಪ್ರತಿವರ್ಷದ ವಾಡಿಕೆಯಾಗಿದೆ. 
 
ಈ ಬಾರಿ ಮುಂಗಾರು ಮಳೆ ಉತ್ತಮವಾಗಿದ್ದು, ದೀರ್ಘಾವಧಿ ಸರಾಸರಿಯಲ್ಲಿ ಶೇ.113 ರಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ