ಶ್ರೀರಾಮ ಭಾರತೀಯನಲ್ಲ , ನೇಪಾಳಿ ಎಂದ ನೇಪಾಳ ಪ್ರಧಾನಿ

ಮಂಗಳವಾರ, 14 ಜುಲೈ 2020 (09:49 IST)
Normal 0 false false false EN-US X-NONE X-NONE

ನೇಪಾಳ : ಹಿಂದೂಗಳ ಪೂಜಿಸುವ ಶ್ರೀರಾಮ ಭಾರತೀಯನಲ್ಲ , ನೇಪಾಳಿ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ವಾದ ಮಂಡಿಸಿ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಶ್ರೀರಾಮ ಹುಟ್ಟಿದು ನೇಪಾಳದಲ್ಲಿ,ಯೇ ಹೊರತು ಭಾರತದಲ್ಲಿ ಅಲ್ಲ. ಶ್ರೀರಾಮ ಹುಟ್ಟಿದ ಅಯೋಧ್ಯೆ  ಇರುವುದು ನೇಪಾಳದ ಬಿರಗುಂಜ್  ನಗರದ ಪಶ್ಚಿಮ ಭಾಗದಲ್ಲಿರುವ ಥೋರಿ ಬಳಿ. ಆದರೆ ಭಾರತವು ನಕಲಿ ಅಯೋಧ್ಯೆಯನ್ನು ಸೃಷ್ಟಿಸಿ ಸಾಂಸ್ಖೃತಿಕ ಮತ್ತು ಐತಿಹಾಸಿಕ ವಸ್ತುಸ್ಥಿತಿಯನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಸೀತೆ ಹುಟ್ಟಿದ್ದು ನೇಪಾಳದ ಜನಕಪುರದಲ್ಲಿ. ಆದರೆ ಭಾರತದ ಅಯೋಧ್ಯೆಯಿಂದ ರಾಜನೊಬ್ಬ ಬಂದು ನೇಪಾಳದಲ್ಲಿರುವ ಸೀತೆಯನ್ನು ವಿವಾಹವಾಗುವುದು ಸಾಧ್ಯವಿಲ್ಲ, ಯಾಕೆಂದರೆ ರಾಮಾಯಣ ಕಾಲದಲ್ಲಿ ಈಗಿನಂತೆ ಸಂವಹನ ವ್ಯವಸ್ಥೆ ಇರಲಿಲ್ಲ. ಆದಕಾರಣ ಶ್ರೀರಾಮ ನೇಪಾಳದ ಅಯೋಧ್ಯೆಯಲ್ಲೇ ಜನಿಸಿದ್ದು ಎಂದು ಅವರು ವಾದಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ