ಇಂದಿನಿಂದ ರಂಜಾನ್ ಉಪವಾಸ ಶುರು

ಭಾನುವಾರ, 3 ಏಪ್ರಿಲ್ 2022 (14:30 IST)
ಹಿಂದೂಗಳ ಹೊಸ ವರ್ಷ ಎಂದೇ ಕರೆಯಲ್ಪಡುವ ಯುಗಾದಿಹಬ್ಬ ಮುಗಿಯುತ್ತಿದ್ದಂತೆ ಮುಸ್ಲಿಮರ ಪವಿತ್ರ ರಂಜಾನ್ ಆರಂಭವಾಗಿದೆ.

ಯುಗಾದಿ ಹಬ್ಬದಂದೇ ದೇಶಾದ್ಯಂತ ರಂಜಾನ್ ಚಾಂದ್ ಕಾಣಿಸಿಕೊಂಡಿದ್ದು, ಮುಸ್ಲಿಂ ಬಾಂಧವರು ಉಪವಾಸ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಕಳೆದ ವರ್ಷ ಕೊರೊನಾ 2ನೇ ಅಲೆಯಿಂದಾಗಿ ಮನೆ-ಮನೆಗೆ ಸೀಮಿತಗೊಳಿಸಿದ್ದ ರಂಜಾನ್ ಪ್ರಾರ್ಥನೆಯನ್ನು ಈ ಬಾರಿ ಅದ್ಧೂರಿಯಿಂದ ಆಚರಿಸುವ ಉತ್ಸಾಹದಲ್ಲಿದ್ದಾರೆ.

ಅದಕ್ಕಾಗಿ ಮಾರುಕಟ್ಟೆಗಳಿಗೆ ಇಂದಿನಿಂದಲೇ ಭೇಟಿ ನೀಡುತ್ತಿದ್ದು, ಮುಸ್ಲಿಂ ಬಾಂಧವರು ತಮಗಿಷ್ಟದ ಉಡುಪು, ಅಲಂಕಾರಿಕ ವಸ್ತುಗಳು, ಮಹಿಳೆಯರು ಕುರ್ತಾ, ಬುರ್ಕಾ ಹಬ್ಬದ ಅಡುಗೆಗೆ ಬೇಕಾದ ದಿನಸಿ, ಕರ್ಜೂರ, ಬಾದಾಮಿ ಹೀಗೆ ನೆಚ್ಚಿನ ಸಿಹಿ ತಿನಿಸುಗಳನ್ನೂ ಖರೀದಿಸಲು ಸಜ್ಜಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ