ದಿಢೀರ್‌ ಹೆಲಿಕಾಪ್ಟರ್‌ಗಳ ಸೇವೆ ದಿಢೀರ್‌ ಬಂದ್‌ !

ಗುರುವಾರ, 1 ಸೆಪ್ಟಂಬರ್ 2022 (10:35 IST)
ನವದೆಹಲಿ : ಸೈನಿಕರ ರವಾನೆಯಲ್ಲಿ ಮಹತ್ವದ ಪಾತ್ರ ವಹಿಸುವ ಚಿನೂಕ್ ಹೆಲಿಕಾಪ್ಟರ್ಗಳ ಸೇವೆಯನ್ನು ಅಮೆರಿಕ ಸೇನೆ ದಿಢೀರ್ ಬಂದ್ ಮಾಡಿದೆ.

ಬರೋಬ್ಬರಿ 400 ಚಿನೂಕ್ ಹೆಲಿಕಾಪ್ಟರ್ಗಳನ್ನು ಅಮೆರಿಕದ ಸೇನೆ ಹೊರಗಿಟ್ಟಿದೆ. ಎಂಜಿನ್ನಲ್ಲಿ ಕಂಡು ಬಂದಿರುವ ತಾಂತ್ರಿಕ ದೋಷದ ಕಾರಣ ಅಮೆರಿಕ ಸೇನೆಯ ಮೆಟಿರಿಯಲ್ ಕಮಾಂಡ್ ಈ ನಿರ್ಣಯ ತೆಗೆದುಕೊಂಡಿದೆ.

ಈ ಬೆಳವಣಿಗೆ ಭಾರತೀಯ ವಾಯುಸೇನೆಯನ್ನು ಆತಂಕಕ್ಕೆ ತಳ್ಳಿದೆ. ಭಾರತ 15 ಚಿನೂಕ್ ಹೆಲಿಕಾಪ್ಟರ್ಗಳನ್ನು ಬಳಕೆ ಮಾಡುತ್ತಿರುವ ಕಾರಣ ವಿವರಣೆ ನೀಡುವಂತೆ ಕೋರಿ ಅಮೆರಿಕಗೆ ಪತ್ರ ಬರೆದಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬೋಯಿಂಗ್ ಸಂಸ್ಥೆ ನಿರಾಕರಿಸಿದೆ. ಸಮಸ್ಯೆ ಇತ್ಯರ್ಥ ಮಾಡಲು ಅಮೆರಿಕ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದು ಚಿನೂಕ್ಗೆ ಎಂಜಿನ್ ಒದಗಿಸಿರುವ ಹನಿವೆಲ್ ಸಂಸ್ಥೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ