ಮತದಾರರ ಪಟ್ಟಿಯಲ್ಲಿ ಯಾರದೋ ಹೆಸರಿನ ಮುಂದೆ ಸನ್ನಿ ಲಿಯೋನ್, ಆನೆ, ಪಾರಿವಾಳದ ಫೋಟೋ!

ಶನಿವಾರ, 25 ಆಗಸ್ಟ್ 2018 (10:22 IST)
ಲಕ್ನೋ: ಮತದಾರರ ಪಟ್ಟಿಯ ಎಡವಟ್ಟಿನ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಇದೀಗ ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಂತೂ ಇದು ಮಿತಿ ಮೀರಿದೆ.

ಇಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಾದ ಬಳಿಕ ಜನ ತಮ್ಮ ಹೆಸರಿನ ಜತೆಗಿರುವ ಫೋಟೋ ನೋಡಿ ಅವಾಕ್ಕಾಗಿದ್ದಾರೆ. ಕಾರಣ ತಮ್ಮ ಹೆಸರಿನ ಮುಂದೆ ಯಾವುದೋ ಪ್ರಾಣಿಗಳ ಚಿತ್ರ, ನೀಲಿ ತಾರೆ ಸನ್ನಿ ಲಿಯೋನ್ ಚಿತ್ರಗಳೆಲ್ಲಾ ಪ್ರಕಟವಾಗಿದೆ!

51 ವರ್ಷದ ಮಹಿಳೆಯ ಹೆಸರಿನ ಮುಂದೆ ಸನ್ನಿ ಲಿಯೋನ್ ಫೋಟೋ ಇದೆ. ಇನ್ನು, 56 ವರ್ಷದ ವೃದ್ಧನ ಹೆಸರಿನ ಮುಂದೆ ಆನೆಯ ಚಿತ್ರವೊಂದು ಪ್ರಕಟವಾಗಿದೆ. ಈ ಎಡವಟ್ಟಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಇದೀಗ ತನಿಖೆಗೆ ಆದೇಶಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ