ಸ್ತನಗಳನ್ನು ಸ್ಪರ್ಶಿಸುವುದು ಅತ್ಯಾಚಾರವಲ್ಲ ಎಂದಿದ್ದ ಅಲಹಾಬಾದ್ ಕೋರ್ಟ್ ತೀರ್ಪಿಗೆ ಸುಪ್ರೀಂ ಚಾಟಿ

Krishnaveni K

ಬುಧವಾರ, 26 ಮಾರ್ಚ್ 2025 (16:48 IST)
ನವದೆಹಲಿ: ಸ್ತನಗಳನ್ನು ಸ್ಪರ್ಶಿಸುವುದು, ಪೈಜಾಮದ ದಾರ ಎಳೆಯುವುದು ಅತ್ಯಾಚಾರವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ನ ವಿವಾದಾತ್ಮಕ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಇದು ಸಂಪೂರ್ಣ ಅಸಂವೇದನಾಶೀಲ ಮತ್ತು ಅಮಾನವೀಯ ಆದೇಶ ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಮಾರ್ಚ್ 17 ರಂದು ಅಲಹಾಬಾದ್ ಹೈಕೋರ್ಟ್ ಸ್ತನಗಳನ್ನು ಸ್ಪರ್ಶಿಸುವುದು, ಪೈಜಾಮದ ದಾರ ಎಳೆಯುವುದು ಅತ್ಯಾಚಾರವಲ್ಲ. ಬದಲಾಗಿ ಇದು ಮಹಿಳೆಯರ ಮೇಲಿನ ದೌರ್ಜನ್ಯವಾಗಿದೆ ಎಂದು ತೀರ್ಪಿತ್ತಿತ್ತು.

ಈ ತೀರ್ಪು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.ಸಾಮಾನ್ಯವಾಗಿ ನಾವು ಇಂತಹ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡುವಾಗ ತಡವಾಗುತ್ತದೆ. ಆದರೆ ಈ ತೀರ್ಪಿನಲ್ಲಿ ಕೆಲವು ಟೀಕೆಗಳು ಕಾನೂನಿನ ಮೂಲ ಸಿದ್ಧಾಂತಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಮತ್ತು ಅಸಂವೇದನಾಶೀಲವಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು ಆದೇಶ ನೀಡುವವರಿಗೆ ಸೂಕ್ಷ್ಮತೆಯ ಅರಿವು ಎದ್ದು ಕಾಣುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ನ್ಯಾ. ಬಿ.ಆರ್ ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ತೀರ್ಪಿತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ