ಆರೋಪಿ ಎಂದು ಮಾತ್ರವಲ್ಲ, ಅಪರಾಧಿ ಎಂದೇ ಕೋರ್ಟ್ ನಲ್ಲಿ ಸಾಬೀತಾದರೂ ಅಂತಹವರಿಗೆ ಸೇರಿದ ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸಿ ಧ್ವಂಸ ಮಾಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆ ಮೂಲಕ ಬುಲ್ಡೋಜರ್ ನ್ಯಾಯದ ವಿರುದ್ಧ ಅಸಮಾಧಾನ ಹೊರಹಾಕಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಆರ್ ಗವಾಯಿ, ಮಗ ದಂಗೆಕೋರನೇ ಇರಬಹುದು. ಆದರೆ ಹಾಗಂತ ಆತನ ಮನೆ ಧ್ವಂಸ ಮಾಡಿದರೆ ಆತನ ತಂದೆ-ತಾಯಿ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದೆ. ಅನಧಿಕೃತ ಕಟ್ಟಡಗಳಾಗಿದ್ದರೆ ಅದನ್ನು ಸಮರ್ಥಿಸಬಹುದು. ಆದರೆ ಅಪರಾಧಿಗಳ ಮನೆ ಕೆಡವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.