ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಹಿಂದಿನ ಬ್ರಿಟಿಷ್ ಸರ್ಕಾರದ ಕಾನೂನನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ಭಾರತೀಯ ದಂಡಸಂಹಿತೆ 377 ನೇ ವಿಧಿಯನ್ನು ರದ್ದುಗೊಳಿಸಿದೆ. ಸಲಿಂಗ ಕಾಮ ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆ 377 ನೇ ಪರಿಚ್ಛೇದಕ್ಕೆ ತಿದ್ದುಪಡಿ ತರುವ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಜುಲೈ 17 ರಂದು ವಿಚಾರಣೆ ಅಂತ್ಯಗೊಳಿಸಿತ್ತು. ಇದೀಗ ಪ್ರಕರಣದ ತೀರ್ಪು ಘೋಷಿಸಿದೆ.