ಚಂದನ್ ಶೆಟ್ಟಿ ಹಾಡಿನ ವಿವಾದ ಕೊನೆಗೂ ಅಂತ್ಯ
ಚಂದನ್ ಶೆಟ್ಟಿ ಹಾಡಿದ ಹಾಡು ಮಾದಕ ದ್ರವ್ಯ ಸೇವಿಸಲು ಉತ್ತೇಜನ ನೀಡುವಂತಿದೆ ಎಂಬ ಕಾರಣಕ್ಕೆ ಮಾದಕ ದ್ರವ್ಯ ದಳ ಚಂದನ್ ಶೆಟ್ಟಿ ನೋಟಿಸ್ ಜಾರಿ ಮಾಡಿತ್ತು.
ಈಗ ಚಂದನ್ ಶೆಟ್ಟಿಗೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂಬರಹ ನೀಡಿರುವ ಮಾದಕ ದ್ರವ್ಯ ನಿಗ್ರಹ ದಳ ಮಾದಕ ವಸ್ತು ಕುರಿತು ಹಾಡನ್ನು ಹಾಡಿದ್ದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ನಿಮ್ಮನ್ನು ವಿಚಾರಣೆಗೊಳಪಡಿಸಲಾಯಿತು. ಇದೀಗ ವಿಚಾರಣೆ ಮುಕ್ತಾಯಗೊಂಡಿದೆ. ಇನ್ನು ಯಾವುದೇ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಚಂದನ್ ಶೆಟ್ಟಿ ನಿರಾಳವಾಗಿದ್ದಾರೆ.