ಕಿರಿಕ್ ಮಾಡುತ್ತಿದ್ದ ಫಾಲೋವರ್ ನ ಟ್ವಿಟರ್ ಖಾತೆ ಬ್ಲಾಕ್ ಮಾಡಿದ ಸಚಿವೆ ಸುಷ್ಮಾ ಸ್ವರಾಜ್

ಮಂಗಳವಾರ, 3 ಜುಲೈ 2018 (13:48 IST)
ನವದೆಹಲಿ: ಇತ್ತೀಚೆಗೆ ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ಕೊಡಿಸಲು ನೆರವಾದ ವಿಚಾರದಲ್ಲಿ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇದೀಗ ತಮ್ಮ ಟ್ವಿಟರ್ ಖಾತೆಯಿಂದ ಒಬ್ಬ ಫಾಲೋವರ್ ನನ್ನು ಬ್ಲಾಕ್ ಮಾಡಿದ್ದಾರೆ.

ತನಗೆ ಟ್ವಿಟರ್ ಮೂಲಕ ಕಿರಿ ಕಿರಿ ಮಾಡುತ್ತಿದ್ದ ಸೋನಂ ಮಹಾಜನ್ ಎಂಬವರ ಟ್ವಿಟರ್ ಖಾತೆಯನ್ನು ಸುಷ್ಮಾ ಬ್ಲಾಕ್ ಮಾಡಿದ್ದಾರೆ. ಈ ವ್ಯಕ್ತಿ ಆಸ್ ಯು ನಾಟ್ ವಿಶ್ ಎಂಬ ಹೆಸರಿನ ಖಾತೆಯಿಂದ ಟ್ವೀಟ್ ಮಾಡುತ್ತಿದ್ದರು.

‘ತಡವೇಕೆ? ತೆಗೆದುಕೊಳ್ಳಿ, ನಿಮ್ಮನ್ನು ಬ್ಲಾಕ್ ಮಾಡಲಾಗಿದೆ’ ಎಂದು ಮಹಾಜನ್ ಗೆ ಟ್ವೀಟ್ ಮಾಡಿ ಸುಷ್ಮಾ ಸ್ವರಾಜ್ ಬ್ಲಾಕ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಾಜನ್ ಕೂಡಾ ಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೆ. ನಿಮ್ಮ ಪರವಾಗಿ ವಾದ ಮಾಡುತ್ತಿದ್ದೆ. ಅದಕ್ಕೆ ತಕ್ಕ ಬಹುಮಾನ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ