ಲೋಕಸಭೆ ಚುನಾವಣೆ ಸ್ಪರ್ಧಿಸಲ್ಲ ಎಂದ ಸಚಿವೆ ಸುಷ್ಮಾ ಸ್ವರಾಜ್ ಗೆ ಪತಿ ತಮಾಷೆ ಮಾಡಿದ್ದು ಹೀಗೆ!

ಬುಧವಾರ, 21 ನವೆಂಬರ್ 2018 (09:26 IST)
ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಅವರ ಪತಿ, ಮಿಜೋರಾಂ ರಾಜ್ಯಪಾಲ ಸ್ವರಾಜ್ ಕೌಶಲ್ ತಮಾಷೆ ಮಾಡಿದ್ದು ಹೀಗೆ!

‘ಮೇಡಂ ಮುಂಬರುವ ಚುನಾವಣೆಗೆ ಸ್ಪರ್ಧಿಸಲ್ಲ ಎಂಬ ನಿಮ್ಮ ನಿರ್ಧಾರಕ್ಕೆ ಧನ್ಯವಾದ. ಮಿಲ್ಕಾ ಸಿಂಗ್ ಕೂಡಾ ಒಂದು ದಿನ ಓಡುವುದನ್ನು ನಿಲ್ಲಿಸಿದ್ದ ಎನ್ನುವುದು ನನಗೆ ಗೊತ್ತು’ ಎಂದು ಟ್ವಿಟರ್ ನಲ್ಲಿ ಪತ್ನಿಯ ಕಾಲೆಳೆದಿದ್ದಾರೆ.

‘ಈ ಮ್ಯಾರಥಾನ್ 1977 ರಿಂದ ಶುರುವಾಗಿದೆ. ಅಂದರೆ 41 ವರ್ಷ. ನೀನು 11 ನೇರ ಚುನಾವಣೆ ಸ್ಪರ್ಧಿಸಿರುವೆ. ಪಕ್ಷ ನಿಮಗೆ ಟಿಕೆಟ್ ಕೊಡದೇ ಇದ್ದಾಗ 1991 ಮತ್ತು 2004 ರಲ್ಲಿ ಬಿಟ್ಟರೆ ಉಳಿದೆಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿರುವೆ. ನಾಲ್ಕು ಬಾರಿ ಲೋಕಸಭೆ, ಮೂರು ಬಾರಿ ರಾಜ್ಯಸಭೆ ಮತ್ತು ಮೂರು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವೆ. ನಿನಗೆ 25 ವರ್ಷವಾದಾಗಿನಿಂದ ಚುನಾವಣೆಗೆ ಸ್ಪರ್ಧಿಸುತ್ತಲೇ ಇರುವೆ. 41 ವರ್ಷ ಚುನಾವಣೆ ಸ್ಪರ್ಧಿಸುವುದೆಂದರೆ ಒಂಥರಾ ಮ್ಯಾರಥಾನ್ ಇದ್ದಂತೆ ಬಿಡು’ ಎಂದು ಸ್ವರಾಜ್ ಕೌಶಲ್ ತಮಾಷೆಯಾಗಿಯೇ ತಮ್ಮ ಪತ್ನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ವಿಶ್ರಾಂತಿ ತಗೋ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ