ಪತಿಯ ಸಮ್ಮುಖದಲ್ಲಿಯೇ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನ

ಶನಿವಾರ, 2 ಡಿಸೆಂಬರ್ 2023 (12:09 IST)
ಚಾಲಕ, ಕಂಡಕ್ಟರ್ ಮತ್ತು ಪ್ರಯಾಣಿಕ ಸೇರಿ ಮೂವರು ಮಾತ್ರ ಪ್ರಯಾಣಿಸುತ್ತಿದ್ದ ಸಿಟಿ ಬಸ್‌ನಲ್ಲಿ. ಮಹಿಳೆ ಮತ್ತು ಆಕೆಯ ಪತಿ ಹಾಗೂ ಆರು ವರ್ಷದ ಮಗುವಿನೊಂದಿಗೆ ಸಿಟಿ ಬಸ್ ಹತ್ತಿದ್ದಾರೆ. ಬಸ್‌ನಲ್ಲಿಯೇ ಆರೋಪಿಗಳು ಪತಿಯ ಸಮ್ಮುಖದಲ್ಲಿಯೇ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ಹೇಯ ಘಟನೆ ವರದಿಯಾಗಿದೆ.
 
ಸಿಟಿ ಬಸ್ ಚಾಲಕ ಮತ್ತು ಕಂಡಕ್ಟರ್ ಹಾಗೂ ಪ್ರಯಾಣಿಕ ಸೇರಿ ಪತಿಯ ಎದುರಿನಲ್ಲೇ ಪತ್ನಿಯ ಮೇಲೆ ಅತ್ಯಾಚಾರವೆಸಗುವ ಪ್ರಯತ್ನದ ಘಟನೆ ಆಗ್ರಾದ ಫತೇಹಪುರ್‌ನ ಸಿಕ್ರಿ ನಗರದಲ್ಲಿ ನಡೆದಿದೆ.
 
ಚಾಲಕ ಬಸ್ ನಿಲ್ಲಿಸುವವರೆಗೆ ಪ್ರಯಾಣ ಸಾಮಾನ್ಯವಾಗಿ ಸಾಗಿತ್ತು. ಚಾಲಕ ಬಸ್ ನಿಲ್ಲಿಸಿದಾಗ ಕಂಡಕ್ಟರ್,  ಪ್ರಯಾಣಿಕ ಪತಿಯನ್ನು ಥಳಿಸುತ್ತಿದ್ದರೇ ಮತ್ತೊಬ್ಬ ಆರೋಪಿ ಚಾಲಕ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿದ್ದ.
 
ಏತನ್ಮಧ್ಯೆ, ಮಹಿಳೆಯ ಪತಿ ಆರೋಪಿಗಳ ಹಲ್ಲೆಯಿಂದ ಪಾರಾಗುವಲ್ಲಿ ಯಶಸ್ವಿಯಾಗಿ ಜೋರಾಗಿ ಕೂಗುತ್ತಾ ಸಾರ್ವಜನಿಕರನ್ನು ಕರೆಯುವಲ್ಲಿ ಯಶಸ್ವಿಯಾದ. ಸಾರ್ವಜನಿಕರನ್ನು ಕಂಡ ಆರೋಪಿಗಳು ಬಸ್‌ನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.
 
ಘಟಾನ ಸ್ಥಳಕ್ಕೆ ಬಂದ ಪೊಲೀಸರು ಬಸ್ ವಶಕ್ಕೆ ತೆಗೆದುಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಆಕ್ರೋಶಗೊಂಡು ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಜನತೆಯ ಕೋಪದಿಂದ ಕಂಗಾಲಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ