ಹೀಯಾಳಿಸಿದ ಪತ್ನಿಗೆ ಇಹಲೋಕ ತೋರಿಸಿದ ಪತಿ

ಶುಕ್ರವಾರ, 1 ಡಿಸೆಂಬರ್ 2023 (22:53 IST)
ಉದ್ಯೋಗವಿಲ್ಲದ ವ್ಯಕ್ತಿಯೊಬ್ಬ ಹೀಯಾಳಿಸಿದ ತನ್ನ 30 ವರ್ಷದ ಪತ್ನಿಯನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದ ಜೈಸಲ್ಮೇರ್ ನಗರದಲ್ಲಿ ನಡೆದಿದೆ.
 
ಕಳೆದ ಕೆಲವು ತಿಂಗಳಿನಿಂದ ವ್ಯಕ್ತಿಗೆ ಕೆಲಸವಿಲ್ಲದ ಕಾರಣ ಮನೆ ಬಾಡಿಗೆಯಿಂದ ಜೀವನ ನಡೆಸುತ್ತಿದ್ದರು. ಈ ವಿಚಾರಕ್ಕೆ ಆಗಾಗ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಪತ್ನಿ ಪತಿಯ ಬಗ್ಗೆ ಹೀಯಾಳಿಸಿದ ಹಿನ್ನಲೆಯಲ್ಲಿ ಕೋಪಗೊಂಡ ಪತಿ ಕತ್ತರಿಯಿಂದ ಆಕೆಯ ಕತ್ತು ಮತ್ತು ದೇಹಕ್ಕೆ ಇರಿದಿದ್ದಾನೆ. ಇದರ ಪರಿಣಾಮ ಆಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ.
 
ಈ ಬಗ್ಗೆ ಆತ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.          

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ