ಶಾಲೆಯಲ್ಲಿ ಗೋಮಾಂಸ ತಯಾರಿಸಿ ಅರೆಸ್ಟ್ ಆದ ಶಿಕ್ಷಕ
ನಾಸಿರುದ್ದೀನ್ ಅಹಮ್ಮದ್ ಎಂಬ ಶಿಕ್ಷಕ ದಾರಂಗ್ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಅಡುಗೆ ಮನೆಯಲ್ಲಿ ಗೋಮಾಂಸ ತಯಾರಿಸಿ ಸಿಕ್ಕಿಬಿದ್ದಿದ್ದಾರೆ.
ತಾನು ಮಾಂಸದಡುಗೆ ಮಾಡಿದ್ದಲ್ಲದೆ, ಕೆಲವು ವಿದ್ಯಾರ್ಥಿಗಳಿಗೂ ಅದನ್ನು ಉಣಬಡಿಸಿದ್ದಾರೆ ಎಂದು ಶಿಕ್ಷಕನ ಮೇಲೆ ಆರೋಪಿಸಲಾಗಿದೆ. ಈ ರೀತಿ ಮಾಡುವ ಮೂಲಕ ಶಿಕ್ಷಕ ಒಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ.